ರೈಲಿಗೆ ಸಿಕ್ಕು ಕಾಡುಕೋಣ ಸಾವು

ಮಂಗಳವಾರ, ಏಪ್ರಿಲ್ 23, 2019
31 °C

ರೈಲಿಗೆ ಸಿಕ್ಕು ಕಾಡುಕೋಣ ಸಾವು

Published:
Updated:
Prajavani

ಖಾನಾಪುರ: ತಾಲ್ಲೂಕಿನ ಲೋಂಡಾ ಅರಣ್ಯ ವಲಯದ ಗವ್ವೇಗಾಳಿ ಗ್ರಾಮದ ಬಳಿ ಸೋಮವಾರ ರೈಲು ಹೊಡೆತಕ್ಕೆ ಸಿಲುಕಿ ಕಾಡುಕೋಣವೊಂದು ಮೃತಪಟ್ಟಿದೆ.

ಗ್ರಾಮದ ಮೂಲಕ ಹಾದುಹೋಗುವ ಲೋಂಡಾ- ಕ್ಯಾಸಲರಾಕ್ ಮಾರ್ಗದ ರೈಲು ಹಳಿಯ ಮೇಲೆ ಪ್ರಯಾಣಿಕರು ಎಸೆದಿದ್ದ ತಿಂಡಿಯನ್ನು ಕಾಡುಕೋಣ ತಿನ್ನುತ್ತಿದ್ದಾಗ ಹಿಂಬದಿಯಿಂದ ಬಂದ ರೈಲು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರುಂಡ ಹಾಗೂ ದೇಹ ಬೇರ್ಪಟ್ಟಿವೆ. ರುಂಡ ಮಾತ್ರ ಸ್ಥಳದಲ್ಲಿ ದೊರೆತಿದ್ದು, ದೇಹದ ಇತರ ಭಾಗ ದೂರದವರೆಗೆ ಹೋಗಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ಡಿಎಫ್ಒ ಎಂ.ವಿ ಅಮರನಾಥ್, ಖಾನಾಪುರ ಎಸಿಎಫ್ ಸಿ.ಬಿ ಪಾಟೀಲ, ವಲಯ ಅರಣ್ಯ ಅಧಿಕಾರಿ ಬಸವರಾಜ ವಾಳದ ಮತ್ತು ಸಿಬ್ಬಂದಿ ಮೃತ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಮೂರು ವರ್ಷದ ಅವಧಿಯಲ್ಲಿ ಈ ಮಾರ್ಗದಲ್ಲಿ 15ಕ್ಕೂ ಹೆಚ್ಚು ಕಾಡುಕೋಣಗಳು, ಒಂದು ಕಾಡಾನೆ ಸೇರಿದಂತೆ ಹಲವು ವನ್ಯಜೀವಿಗಳು ಮೃತಪಟ್ಟಿವೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !