ಸಂಸ್ಥಾನಿಕರಿಂದ ಬಿಜೆಪಿಗೆ ಹಿನ್ನಡೆ

7

ಸಂಸ್ಥಾನಿಕರಿಂದ ಬಿಜೆಪಿಗೆ ಹಿನ್ನಡೆ

Published:
Updated:
Deccan Herald

ತುಮಕೂರು: ‘ಬೆಂಗಳೂರು, ಬಳ್ಳಾರಿ, ಶಿವಮೊಗ್ಗ ಹೀಗೆ ಕೆಲವು ಕಡೆಗಳಲ್ಲಿ ಪಕ್ಷದ ಕೆಲವು ನಾಯಕರು ತಮ್ಮದೇ ಆದ ಸಂಸ್ಥಾನಗಳನ್ನು ಕಟ್ಟಿಕೊಂಡಿದ್ದಾರೆ. ಇಂತಹವರು ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಆರೋಪಿಸಿದರು.

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷದ ಅಸ್ತಿತ್ವವೇ ಕಾರ್ಯಕರ್ತರು. ಆದರೆ, ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಬೇರೆಯವರ ಹಿಡಿತಕ್ಕೆ ಪಕ್ಷ ಸಿಲುಕುತ್ತಿದೆ. ಇದರಿಂದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಯಿತು. ಇನ್ನಾದರೂ ಈ ಧೋರಣೆ ಬದಲಾಗಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಇದ್ದಾರೆ. ಎಲ್ಲೆಡೆ ಪ್ರಬಲ ಪಡೆ ಇದೆ. ಆದರೆ ಉಪಚುನಾವಣೆ ನಡೆದ ಐದು ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರ ಬಲವನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ’ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !