ಬುಧವಾರ, ಅಕ್ಟೋಬರ್ 16, 2019
27 °C

‘ಸಿಎಂ ವಿರುದ್ಧ ಕೇಂದ್ರದ ಪಿತೂರಿ’

Published:
Updated:

ಬಾಗಲಕೋಟೆ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಗ್ಗೆ ಉತ್ತರ ಕರ್ನಾಟಕದ ಜನರಲ್ಲಿ ಅಸಮಾಧಾನ ಹುಟ್ಟಲಿ ಎಂದೇ ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡುತ್ತಿಲ್ಲ. ಇದು ಕೇಂದ್ರ ಸರ್ಕಾರದ ಪಿತೂರಿಯಾಗಿದೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಜನಬೆಂಬಲವಿದೆ. ಅದನ್ನು ತಪ್ಪಿಸಲು ಕಾಣದ ಕೈಗಳು ಅವರು ಕೆಲಸ ಮಾಡದಂತೆ ಕೈಕಟ್ಟಿ ಹಾಕುತ್ತಿವೆ’ ಎಂದರು.

‘ಕೇಂದ್ರದ ನಡೆ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ 25 ಸಂಸದರೂ ಇದೇ ನಿಲುವು ತೋರಿ ಪರಿಹಾರ ಬಿಡುಗಡೆ ಮಾಡಿಸಲಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ನಮ್ಮೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳಲಿ' ಎಂದು ಹೇಳಿದರು.

Post Comments (+)