ಸೋಮವಾರ, ಸೆಪ್ಟೆಂಬರ್ 16, 2019
21 °C

ಸುಭಾಷ್‌ ವಿರುದ್ಧ ಬಿಜೆಪಿ ದೂರು

Published:
Updated:

ಬೆಂಗಳೂರು: ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ್‌ ರಾಥೋಡ್‌ ನಾಮಪತ್ರ ಸಲ್ಲಿಸುವ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕವು ಚುನಾವಣಾ ಆಯೋಗಕ್ಕೆ ಬುಧವಾರ ದೂರು ನೀಡಿದೆ.

‘ಅವರು ನಾಲ್ಕು ಕಡೆಗಳಲ್ಲಿ ಚುನಾವಣಾ ಗುರುತಿನ ಚೀಟಿ ಹೊಂದಿದ್ದು, ಅದರ ವಿವರಗಳನ್ನು ಕಲಬುರ್ಗಿ ಚುನಾವಣಾಧಿಕಾರಿ ಅವರಿಗೆ ಆಧಾರಸಹಿತವಾಗಿ ನೀಡಲಾಗಿದೆ. ರಾಥೋಡ್‌ ವಿರುದ್ಧ ಒಂದು ಎಫ್‌ಐಆರ್ ದಾಖಲಾಗಿದೆ. ಅದನ್ನು ಸಹ ಮುಚ್ಚಿಟ್ಟಿದ್ದಾರೆ. ಅವರ ಅಭ್ಯರ್ಥಿತನವನ್ನು ಅಸಿಂಧುಗೊಳಿಸಬೇಕು’ ಎಂದು ಅಶ್ವತ್ಥನಾರಾಯಣ ಗೌಡ ನೇತೃತ್ವದ ನಿಯೋಗ ಒತ್ತಾಯಿಸಿದೆ.

Post Comments (+)