ಕಮಲದತ್ತ ಅತೃಪ್ತ 8ಕ್ಕೂ ಹೆಚ್ಚು ಶಾಸಕರು?, ‘ಕೈ’ ಶಾಸಕರೂ ರೆಸಾರ್ಟ್‌ಗೆ

7
ಬಿಜೆಪಿಗೂ ಆಪರೇಷನ್‌ ಭೀತಿ

ಕಮಲದತ್ತ ಅತೃಪ್ತ 8ಕ್ಕೂ ಹೆಚ್ಚು ಶಾಸಕರು?, ‘ಕೈ’ ಶಾಸಕರೂ ರೆಸಾರ್ಟ್‌ಗೆ

Published:
Updated:

ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯ ‘ಆಪರೇಷನ್‌ ಕಮಲ’ದ ಬಲೆಯೊಳಗೆ ಪಕ್ಷದ ಎಂಟಕ್ಕೂ ಹೆಚ್ಚು ಶಾಸಕರು ಬಿದ್ದಿರುವ ಮಾಹಿತಿ ಖಚಿತಗೊಳ್ಳುತ್ತಿದ್ದಂತೆ ಕಾಂಗ್ರೆಸ್‌, ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ‘ರೆಸಾರ್ಟ್‌ ರಾಜಕೀಯ’ದ ಮೊರೆ ಹೋಗಿದೆ.

ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರವನ್ನು ಅಲ್ಪಮತಕ್ಕಿಳಿಸುವ ಕಾರ್ಯತಂತ್ರದ ಜೊತೆಗೇ  ಕಾಂಗ್ರೆಸ್‌, ಜೆಡಿಎಸ್‌ ನಾಯಕರು ತಮ್ಮ ಶಾಸಕರನ್ನು ‘ಆಪರೇಷನ್’ ಮಾಡಬಹುದೆಂಬ ಆತಂಕದಿಂದ ಬಿಜೆಪಿ ನಾಯಕರು, ಹರಿಯಾಣದ ಗುರುಗ್ರಾಮದ ಐಷಾರಾಮಿ ಹೋಟೆಲ್‌ನಲ್ಲಿ ನಾಲ್ಕು ದಿನಗಳಿಂದ ಕೂಡಿಹಾಕಿದ್ದಾರೆ.

ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷ ಬಿಜೆಪಿ ಶಾಸಕರನ್ನು ಆಯಾ ಪಕ್ಷಗಳ ನಾಯಕರು ಬಲವಂತವಾಗಿ ರೆಸಾರ್ಟ್‌ನಲ್ಲಿ ಇರಿಸಿದ್ದಾರೆ. ಇದರಿಂದಾಗಿ ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ರಂಗೇರಿದಂತಾಗಿದೆ. 

ಶಾಸಕರ ಗೈರು

ಕಮಲ ಪಕ್ಷದ ಜೊತೆ ‘ಕೈ’ ಜೋಡಿಸಿದ್ದಾರೆ ಎನ್ನಲಾದ ಅತೃಪ್ತ ಶಾಸಕರಾದ ರಮೇಶ ಜಾರಕಿಹೊಳಿ (ಗೋಕಾಕ) ಮತ್ತು ಮಹೇಶ ಕುಮಟಳ್ಳಿ (ಅಥಣಿ) ಶುಕ್ರವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ವಿಶೇಷ ಸಭೆಗೆ ಗೈರಾದರು. ಅನಾರೋಗ್ಯ ಕಾರಣ ನೀಡಿ ಉಮೇಶ ಜಾಧವ್‌ (ಚಿಂಚೋಳಿ) ಸಭೆಯಿಂದ ದೂರ ಉಳಿದರೆ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಾಜರಾಗಬೇಕೆಂಬ ನೆಪ ಹೇಳಿ ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ) ಸಭೆಗೆ ಹಾಜರಾಗಲಿಲ್ಲ.

ಸಿಎಲ್‌ಪಿ ಸಭೆಗೆ ಗೈರಾದರೆ ‘ಪಕ್ಷಾಂತರ ನಿಷೇಧ’ ಕಾಯ್ದೆಯಡಿ ಪಕ್ಷದ ಸದಸ್ಯತ್ವ ತ್ಯಜಿಸಿದ್ದಾರೆ ಎಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳುವ ಖಡಕ್‌ ಎಚ್ಚರಿಕೆಯ ಹೊರತಾಗಿಯೂ ನಾಲ್ವರು ಗೈರಾಗಿರುವುದು ಕೈ ನಾಯಕರಲ್ಲಿ ತಳಮಳ ಉಂಟು ಮಾಡಿದೆ. ಈ ನಾಲ್ವರ ಜತೆ, ಇನ್ನೂ ಕೆಲವು ಶಾಸಕರು ಬಿಜೆಪಿಯ ಆಮಿಷಕ್ಕೆ ಬಲಿಯಾಗಿದ್ದಾರೆ. ಈ ಶಾಸಕರು ಸಭೆಗೆ ಹಾಜರಾದರೂ ಆ ಪಕ್ಷದತ್ತ ವಾಲಬಹುದೆಂಬ ಸುಳಿವು ಸಿಕ್ಕಿರುವುದು ಈ ನಾಯಕರನ್ನು ಕಂಗೆಡಿಸಿದೆ.

ಹೀಗಾಗಿ, ವಿಧಾನಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆ ಮುಗಿಯುತ್ತಿದ್ದಂತೆ ಬಿಡದಿ ಬಳಿಯ ಈಗಲ್‌ಟನ್‌ ರೆಸಾರ್ಟ್‌ಗೆ ಎಲ್ಲ ಶಾಸಕರನ್ನು ಸ್ಥಳಾಂತರಿಸಲಾಗಿದೆ. ಶಾಸಕರನ್ನು ಕರೆದೊಯ್ಯಲು ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಭೆ ಮುಗಿದ ಬಳಿಕ ಕೆಲವು ಶಾಸಕರು ತಮ್ಮ ಸ್ವಂತ ವಾಹನದಲ್ಲಿ ತೆರಳಿರುವುದು ಅನುಮಾನಗಳಿಗೆ ಕಾರಣವಾಗಿದೆ.

* ಇದನ್ನೂ ಓದಿ: ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರ ವಾಸ್ತವ್ಯ

ಗೈರಾದವರಿಗೆ ನೋಟಿಸ್‌

ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಗೈರಾದ ಇಬ್ಬರು ಶಾಸಕರಿಗೆ ನೋಟಿಸ್‌ ನೀಡಲಾಗುವುದು. ಇಬ್ಬರು ನೀಡಿದ ಕಾರಣ ಸೂಕ್ತವಾದುದೇ ಎಂದು ಪರಿಶೀಲಿಸಲಾಗುವುದು. ಬಳಿಕ ಗೈರು ಹಾಜರಾದವರ ಮೇಲೆ ಕ್ರಮ ತೆಗೆದುಕೊಳ್ಳುವ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ’ ಎಂದರು.

‘ನಮ್ಮ ಒಟ್ಟು 80 ಶಾಸಕರ ಪೈಕಿ 76 ಜನ ಸಭೆಗೆ ಹಾಜರಾಗಿದ್ದಾರೆ. ನಮಗೆ ಆಪರೇಷನ್ ಕಮಲದ ಭಯ ಇಲ್ಲ. ಆದರೆ, ಬಿಜೆಪಿಯವರು ಹಿಂಸೆ ಕೊಡುತ್ತಿದ್ದಾರಲ್ಲ. ಬ್ಯಾಗ್‌ ತಕ್ಕೊಂಡು ತಕ್ಕೊಳ್ಳಿ, ತಕ್ಕೊಳ್ಳಿ ಎನ್ನುತ್ತಾರಲ್ವ. ಅವರ ದಾಳಿಯಿಂದ ತಪ್ಪಿಸಿಕೊಳ್ಳಬೇಕಲ್ಲವೇ. ಈ ಕಾರಣಕ್ಕೆ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗುತ್ತಿದ್ದೇವೆ’ ಎಂದು ಅವರು ಸಮರ್ಥನೆ ನೀಡಿದರು.

* ಇದನ್ನೂ ಓದಿ: ರಾಷ್ಟ್ರಪತಿ ಆಡಳಿತ ಹೇರಬಹುದೇ ?

‘ಎಷ್ಟು ದಿನ ನಿಮ್ಮ ಶಾಸಕರು ರೆಸಾರ್ಟ್‌ನಲ್ಲಿ ಇರುತ್ತಾರೆ’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ‘ರಾಜ್ಯದಲ್ಲಿ ಬರಗಾಲವಿದೆ. ಆ ಬಗ್ಗೆ ಶಾಸಕರ ಜೊತೆ ಚರ್ಚೆ ನಡೆಸಬೇಕಿದೆ. ಜೊತೆಯಲ್ಲಿ ಪಕ್ಷದ ಎಲ್ಲ ಸಂಸದರೂ ಇರುತ್ತಾರೆ. ಅಗತ್ಯವಿರುವಷ್ಟು ದಿನ ಒಂದೇ ಜಾಗದಲ್ಲಿ ಒಟ್ಟಿಗೆ ಇರುತ್ತೇವೆ’ ಎಂದು ಸಮಜಾಯಿಷಿ ನೀಡಿದರು.

‘ನಾವು ಕೂಡಾ ಒಗ್ಗಟ್ಟು ತೋರಿಸಬೇಕಿದೆ. ಆ ಮೂಲಕ, ಪಕ್ಷದ ಶಾಸಕರು ಬಿಜೆಪಿ ಜೊತೆಗಿದ್ದಾರೆ ಎಂದು ಮಾಧ್ಯಮಗಳು ಸುಳ್ಳು ಪ್ರಚಾರ ಮಾಡುತ್ತಿವೆ ಎನ್ನುವುದನ್ನು ರಾಜ್ಯದ, ದೇಶದ ಜನರಿಗೆ ತಿಳಿಸಿ ಕೊಡಬೇಕಿದೆ’ ಎಂದು ತಿಳಿಸಿದರು.

‘ಬಿಜೆಪಿಯವರದ್ದು ಲಫಂಗ ರಾಜಕೀಯ’

‘ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಾದ ನಂತರವೇ ‘ಆಪರೇಷನ್ ಕಮಲ’ದಂಥ ಲಫಂಗ ರಾಜಕಾರಣ ಶುರುವಾಯಿತು. ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

‘ಸರ್ಕಾರ ಪತನಗೊಳಿಸಲು ಬಿಜೆಪಿಯವರು ದೊಡ್ಡ ಹುನ್ನಾರ ನಡೆಸುತ್ತಿದ್ದಾರೆ. ಈ ಯತ್ನದಲ್ಲಿ ಅವರು 2–3 ಬಾರಿ ಮುಖಭಂಗ ಅನುಭವಿಸಿದ್ದಾರೆ’ ಎಂದರು.

‘ ಬಿಜೆಪಿಯ ರಾಜ್ಯದ ನಾಯಕರಷ್ಟೇ ಅಲ್ಲ, ನರೇಂದ್ರ ಮೋದಿ, ಅಮಿತ್ ಶಾ, ಕೇಂದ್ರ ಸಚಿವರೂ ಸರ್ಕಾರ ಕೆಡವಲು ಪ್ರಯತ್ನಿಸುತ್ತಿದ್ದಾರೆ. ಮೈತ್ರಿ ಸರ್ಕಾರ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಅವರು ಕೇವಲ 3–4 ಸ್ಥಾನ ಮಾತ್ರ ಗೆಲ್ಲುತ್ತಾರೆ ಎನ್ನುವುದು ಆ ಪಕ್ಷವೇ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಬಯಲಾಗಿದೆ. ಈ ಕಾರಣಕ್ಕೆ ಲಜ್ಜೆಗೆಟ್ಟ, ಮಾನಗೆಟ್ಟ ಕೆಲಸಕ್ಕೆ ಅವರು ಕೈಹಾಕಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಕೈ’ ಸಿಟ್ಟು ಬೆಂಕಿಯಾಗಲಿದೆ

‘ಶಾಸಕಾಂಗ ಪಕ್ಷದ ಸಭೆಗೆ ಕಾಂಗ್ರೆಸ್ ಶಾಸಕರು ಗೈರಾಗಿರುವುದು ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಹೊಗೆಯಾಡುತ್ತಿರುವುದರ ಸೂಚನೆಯಾಗಿದ್ದು, ಅದು ಬೆಂಕಿ ರೂಪದಲ್ಲಿ ಹೊರಹೊಮ್ಮಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

‘ಗೈರಾಗಿರುವ ಶಾಸಕರ ಸಂಖ್ಯೆ ಮುಖ್ಯವಲ್ಲ. ಕಾಂಗ್ರೆಸ್‌ನಲ್ಲಿ ಅತೃಪ್ತಿ ಇರುವುದು ಸತ್ಯ ಎಂಬುದು ಇದರಿಂದ ಸ್ಪಷ್ಟ. ಕಾಂಗ್ರೆಸ್‌–ಜೆಡಿಎಸ್‌ ನಾಯಕರು ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡದೇ ಇದ್ದರೆ, ಬಿಜೆಪಿ ವಿರೋಧ ಪಕ್ಷವಾಗಿ ಸುಮ್ಮನೆ ಕೂರುವುದಿಲ್ಲ’ ಎಂದು ಅವರು ಗುಡುಗಿದರು.

 

* ಇವನ್ನೂನ್ನೂ ಓದಿ

ಆತಂಕ ಇದ್ದಿದ್ದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಯಡಿಯೂರಪ್ಪ ವ್ಯಂಗ್ಯ

ಅರ್ಧ ಯುದ್ಧ ಮುಗಿದಿದೆ, ಇನ್ನರ್ಧ ಬಾಕಿ: ಬಿಜೆಪಿ​

ಮೈತ್ರಿಗೆ ಕಿಚ್ಚು ಹಚ್ಚಿದ ಬಿಜೆಪಿ: ಜೆಡಿಎಸ್‌, ಕಾಂಗ್ರೆಸ್‌ನಲ್ಲಿ ಕಂಪನ

ಯಡಿಯೂರಪ್ಪ –ಸಿದ್ದರಾಮಯ್ಯ ವಾಕ್ಸಮರ

ಜಗದೀಶ್ ಶೆಟ್ಟರ್‌ರಿಂದ ₹ 60 ಕೋಟಿ ಆಮಿಷ: ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪ​

ಗೋವಾ, ಅಹಮದಾಬಾದ್‌ನಲ್ಲೂ ಅತೃಪ್ತ ಶಾಸಕರನ್ನು ಕೂಡಿಟ್ಟ ಬಿಜೆಪಿ?

ವಾಪಸ್ ಕರೆತಂದರು ಅನ್ನೋದಕ್ಕೆ ನಾವೇನು ಹಾಲು ಕುಡಿಯುವ ಮಕ್ಕಳಾ..?

 * ವಿಧಾನಸಭೆ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಬಿಜೆಪಿ

ಗುರುಗ್ರಾಮದ ರೆಸಾರ್ಟ್‌ನಲ್ಲಿ ಬಿಜೆಪಿಯ ನೂರಕ್ಕೂ ಹೆಚ್ಚು ಶಾಸಕರು

ಶುಭ ಸುದ್ದಿಯ ಭರವಸೆ ಕೊಟ್ಟ ಬಿಎಸ್‌ವೈ; ಐಷಾರಾಮಿ ಧಾಮದಲ್ಲಿ ಬಿಜೆಪಿ ಶಾಸಕರು

ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸು ಪಡೆದ ಪಕ್ಷೇತರ ಶಾಸಕರು

ಹೊಸ ಸರ್ಕಾರ ರಚನೆಗೆ ಸಿದ್ಧ: ಡಿ.ವಿ.ಸದಾನಂದ ಗೌಡ

ಚುರುಕಾಯ್ತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಟ್ವಿಟ್ ವಾರ್

 * ಅವಕಾಶ ಬಳಕೆಗೆ ಬಿಜೆಪಿ ಸನ್ನದ್ಧ: ಸಿ.ಟಿ.ರವಿ​

ಶಾಸಕರು ನಾಟ್‌ ರೀಚಬಲ್ ಆಗಿದ್ದಾಗ ನೀವೇನು ಮಾಡುತ್ತಿದ್ದಿರಿ: ದಿನೇಶ್ ಗುಂಡೂರಾವ್‌ಗೆ ವೇಣುಗೋಪಾಲ್ ತರಾಟೆ

ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿರುವುದರಿಂದ ಸರ್ಕಾರ ಅಸ್ಥಿರವಾಗಲ್ಲ: ಪರಮೇಶ್ವರ್

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !