ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ್‌ಗೆ ‘ಕೈ’ ಕೊಟ್ಟ ಬಿಜೆಪಿ

ಹಳೆಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್‌: ಕಾರ್ಯಕರ್ತನಿಗೆ ದಳ ಮನ್ನಣೆ
Last Updated 18 ಜೂನ್ 2020, 20:54 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್‌.ವಿಶ್ವನಾಥ್‌ ಅವರಿಗೆ ಬಿಜೆಪಿ ನಾಯಕರು ‘ಕೈ’ ಕೊಟ್ಟಿದ್ದು, ಇಳಿಗಾಲದಲ್ಲಿ ಸಚಿವರಾಗಬೇಕು ಎಂಬ ಅವರ ಆಸೆಯೂ ಕಮರಿದೆ.

ಕಾಂಗ್ರೆಸ್ ತೊರೆದು, ಜೆಡಿಎಸ್ ಸೇರಿದ್ದ ವಿಶ್ವನಾಥ್‌ ಶಾಸಕರಾಗಿ ಆಯ್ಕೆಯಾಗಿದ್ದಲ್ಲದೇ, ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಸಚಿವರಾಗಬೇಕು ಎಂಬ ಅವರ ಹಂಬಲಕ್ಕೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ನಾಯಕರೇ ಅಡ್ಡಗಾಲಾಗಿದ್ದರು. ಈ ಸಿಟ್ಟಿನಿಂದ ಪಕ್ಷ ತೊರೆಯಲು ಮುಂದಾಗಿದ್ದ ವಿಶ್ವನಾಥ್‌, ಮೈತ್ರಿ ಸರ್ಕಾರವನ್ನು ಕೆಡಹುವ ತಂತ್ರಗಾರಿಕೆಯ ಮುಂಚೂಣಿಗೆ ಬಂದು ನಿಂತರು. ಅಲ್ಲಿ
ಯವರೆಗೆ ಸರ್ಕಾರ ಕೆಡವಲು ಬೇಕಿದ್ದ ಸಂಖ್ಯಾಬಲ ಕ್ರೋಡೀಕರಿಸುವಲ್ಲಿ ವಿಫಲರಾಗಿದ್ದ ಬಿ.ಎಸ್‌. ಯಡಿಯೂರಪ್ಪ, ವಿಶ್ವನಾಥ್ ರಂಗ ಪ್ರವೇಶ ಮಾಡುತ್ತಿದ್ದಂತೆ ಹೊಸ ಉಮೇದಿನಿಂದ ಅಖಾಡಕ್ಕೆ ಇಳಿದರು. ಏಳೆಂಟು ಜನರಿದ್ದ ಭಿನ್ನಮತರ ಗುಂಪನ್ನು15 ದಾಟಿಸಿದ್ದು ವಿಶ್ವನಾಥ್ ‘ಸಾಧನೆ’.

ಸಿದ್ದರಾಮಯ್ಯ ಆಪ್ತ ವಲಯದಲ್ಲಿದ್ದ ಬೈರತಿ ಬಸವರಾಜು, ಎಸ್.ಟಿ. ಸೋಮಶೇಖರ್, ಮುನಿರತ್ನ ಅವರನ್ನು ವಿಶ್ವನಾಥ್ ಸೆಳೆದರು. ಕಾಂಗ್ರೆಸ್‌ ತೊರೆಯಲು ಎಂದೂ ಮನಸ್ಸು ಮಾಡದಿದ್ದ ರಾಮಲಿಂಗಾರೆಡ್ಡಿ ಅವರನ್ನು ಒಲಿಸಿಕೊಳ್ಳುವಲ್ಲೂ ಯಶಸ್ವಿಯಾಗಿದ್ದರು. ಆದರೆ,
ರೆಡ್ಡಿ ಕೊನೆಕ್ಷಣದಲ್ಲಿ ಹಿಂದಡಿ ಇಟ್ಟಿದ್ದರು. ಛಲ ಬಿಡದ ವಿಶ್ವನಾಥ್‌, ಸರ್ಕಾರ ಪತನಗೊಳಿಸುವಲ್ಲಿ ಜಯಕಂಡಿದ್ದರು.

ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ಗಟ್ಟಿ ಎಂಬುದು ವಿಶ್ವನಾಥ್ ಲೆಕ್ಕಾಚಾರವಾಗಿತ್ತು. ಆದರೆ, ಪಕ್ಷಾಂತರದ ನಿಷೇಧಕಾಯ್ದೆಯಡಿ ಅನರ್ಹಗೊಳಿಸಿದ್ದರಿಂದಾಗಿ ಸಚಿವರಾಗುವ ಭಾಗ್ಯ ಸಿಗಲಿಲ್ಲ. ಅನರ್ಹತೆ ಕುರಿತ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಶಾಸಕರನ್ನು ಅನರ್ಹಗೊಳಿಸಿದ ಸಭಾಧ್ಯಕ್ಷರ ಆದೇಶ ಎತ್ತಿ ಹಿಡಿದಿದ್ದಲ್ಲದೇ‌, ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿತ್ತು. ಯಾವುದಾದರೂ ಚುನಾವಣೆಯಲ್ಲಿ ಗೆದ್ದರೆ ಸಚಿವ ಸ್ಥಾನ ಹೊಂದಬಹುದೆಂದು ಕೋರ್ಟ್ ಹೇಳಿತ್ತು.

‘ನಿಮ್ಮನ್ನು ವಿಧಾನಪರಿಷತ್ ಸದಸ್ಯರಾಗಿ ಮಾಡುತ್ತೇನೆ. ಚುನಾವಣೆಗೆ ನಿಲ್ಲಬೇಡಿ’ ಎಂದು ಉಪಚುನಾವಣೆ ವೇಳೆ ಯಡಿಯೂರಪ್ಪ ಹೇಳಿದ್ದರು. ಹಟದಿಂದ ಟಿಕೆಟ್ ಪಡೆದಿದ್ದ ವಿಶ್ವನಾಥ್ ಪರಾಭವಗೊಂಡಿದ್ದರು. ವಿಧಾನಪರಿಷತ್ತಿನ ಅಭ್ಯರ್ಥಿ ಆಯ್ಕೆಗಾಗಿ ನಡೆದ ಬಿಜೆಪಿಯ ಪ್ರಮುಖರ ಸಮಿತಿ ಸಭೆಯಲ್ಲಿ ಇದು ಚರ್ಚೆಗೆ ಬಂದಿತ್ತು. ವಿಶ್ವನಾಥ್‌ ಸ್ಪರ್ಧಿಸಿ ಸೋತಿರುವುದರಿಂದ ಅವರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿರಲಿಲ್ಲ. ಚುನಾವಣೆಗೆ ನಿಂತಿದ್ದು ಅವರಿಗೆ ಮುಳುವಾಗಿದೆ. ಅನರ್ಹತೆ ವಿಷಯದಲ್ಲಿ ಕೋರ್ಟ್‌ ನೀಡಿದ ತೀರ್ಪಿನಿಂದಾಗಿ ವಿಶ್ವನಾಥ್ ಅವರನ್ನು ನಾಮನಿರ್ದೇಶನ ಮಾಡಲಾಗದು. ಹೀಗಾಗಿ, ಅವರ ಸಚಿವ ಸ್ಥಾನದ ಆಸೆ ಸದ್ಯಕ್ಕೆ ಈಡೇರದು’ ಎಂಬುದು ಬಿಜೆಪಿ ನಾಯಕರ ಅಭಿಮತ.

ಉಪಚುನಾವಣೆ ವೇಳೆ ಎಂ.ಟಿ.ಬಿ. ನಾಗರಾಜ್‌ಗೆ ಅದೇ ಷರತ್ತು ಒಡ್ಡಲಾಗಿತ್ತು. ಆದರೆ, ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಮನವೊಲಿಸಲು ಸಾಧ್ಯವಾಗದೇ ಇರುವ ಕಾರಣಕ್ಕೆ ನಾಗರಾಜ್ ಸೋತಿದ್ದರು. ಈ ಕಾರಣಕ್ಕೆಅವರಿಗೆ ಪರಿಷತ್ ಪ್ರವೇಶ ಸುಲಭವಾ
ಯಿತು ಎಂಬುದು ಬಿಜೆಪಿ ನಾಯಕರ ವಿಶ್ಲೇಷಣೆ.

ಹಳಬರಿಗೆ ‘ಕೈ’ ಮಣೆ: ರಾಜ್ಯಸಭೆ ಚುನಾವಣೆಯಲ್ಲಿ ಹಿರಿತಲೆಗೆ ಮಣೆ ಹಾಕಿದ್ದ ಕಾಂಗ್ರೆಸ್‌, ಪರಿಷತ್‌ ಅಭ್ಯರ್ಥಿತನದ ಆಯ್ಕೆಯಲ್ಲಿ ಅದೇ ಪರಿಪಾಟ ಮುಂದುವರಿಸಿದೆ.

ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿದ್ದ ಬಿ.ಕೆ. ಹರಿಪ್ರಸಾದ್‌, ವಿಧಾನಪರಿಷತ್ತಿನ ಸದಸ್ಯರಾಗಿದ್ದ ನಜೀರ್ ಅಹಮದ್ ಅವರಿಗೆ ಟಿಕೆಟ್‌ ಕೊಟ್ಟಿದೆ. ನಜೀರ್‌ಗೆ ಟಿಕೆಟ್ ಕೊಡುವ ಮೂಲಕ ಸಿದ್ದರಾಮಯ್ಯ ಒತ್ತಾಸೆಯನ್ನು ಎತ್ತಿ ಹಿಡಿದಿದೆ. ಆದರೆ, ಸಿದ್ದರಾಮಯ್ಯನವರ
ವಿರೋಧಿ ಬಣದಲ್ಲೇ ಬಹಳಷ್ಟು ಕಾಲದಿಂದ ಗುರುತಿಸಿಕೊಂಡು ಬಂದಿದ್ದ ಹರಿಪ್ರಸಾದ್‌ಗೆ ಟಿಕೆಟ್ ನೀಡುವ ಮೂಲಕ, ಎಲ್ಲವೂ ನೀವು ಹೇಳಿದಂತೆ ನಡೆಯದು ಎಂಬ ಸಂದೇಶವನ್ನೂ ರವಾನಿಸಿದೆ.

ಕಾಂಗ್ರೆಸ್‌ ಹೈಕಮಾಂಡ್ ಜತೆ ನಿಕಟ ಬಾಂಧವ್ಯ ಹೊಂದಿರುವ ಹರಿಪ್ರಸಾದ್‌, ಹಿಂದುಳಿದ ಸಮುದಾಯಗಳಲ್ಲಿ ಪ್ರಭಾವಿಯಾಗಿರುವ ಬಿಲ್ಲವ ಸಮುದಾಯದವರು. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಇವರ ಬೆನ್ನಿಗೆ ನಿಂತಿದ್ದಾರೆ. ಸಿದ್ದರಾಮಯ್ಯ ಅವ
ರಿಗೆ ಪರ್ಯಾಯವಾಗಿ ರಾಜ್ಯಮಟ್ಟದಲ್ಲಿ ಮತ್ತೊಬ್ಬ ನಾಯಕನನ್ನು ರೂಪಿಸುವುದು ಇದರ ಹಿಂದಿರುವ ತರ್ಕ.

ದಳ ನಡೆ ಭಿನ್ನ: ಕುಟುಂಬದ ಆಪ್ತರಿಗೆ, ದುಡ್ಡಿದ್ದವರಿಗೆ ಅವಕಾಶ ಕಲ್ಪಿಸುವ ಪಕ್ಷ ಎಂದು ಬಿಂಬಿತವಾಗಿದ್ದ ಜೆಡಿಎಸ್‌ ಈ ಬಾರಿ ಭಿನ್ನ ಹಾದಿ ಹಿಡಿದಿದೆ. ಕುಪೇಂದ್ರ ರೆಡ್ಡಿ, ಟಿ.ಎ. ಶರವಣ, ಪ್ರಸಾದ್ ಬಾಬು ಅವರನ್ನು ಬಿಟ್ಟು ಪಕ್ಷದ ಕಾರ್ಯಕರ್ತ ಗೋವಿಂದರಾಜ್‌ ಅವರನ್ನು ಕಣಕ್ಕೆ ಇಳಿಸಿದೆ. ಕೋಲಾರದಲ್ಲಿ ನಡೆದ ಚುನಾವಣೆಗಳ ಹಿಂದಿನ ‘ಆಸ್ತಿ’ಯಾಗಿರುವ ಗೋವಿಂದರಾಜ್‌ ಆಯ್ಕೆಯಿಂದಾಗಿ ಪಕ್ಷದ ಕಾರ್ಯಕರ್ತ
ರಲ್ಲಿ ಹೊಸ ಭರವಸೆ ಮೂಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT