ಸ್ಥಳೀಯ ಸಂಸ್ಥೆಗಳ ಮೀಸಲಾತಿ ಬದಲು ಬಿಜೆಪಿ ಕಿಡಿ

7

ಸ್ಥಳೀಯ ಸಂಸ್ಥೆಗಳ ಮೀಸಲಾತಿ ಬದಲು ಬಿಜೆಪಿ ಕಿಡಿ

Published:
Updated:

ಬೆಂಗಳೂರು: ‘ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟದ ಪ್ರಜಾತಂತ್ರ ವಿರೋಧಿ ಚಟುವಟಿಕೆ ಅವ್ಯಾಹತವಾಗಿ ನಡೆಯು ತ್ತಿದ್ದು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಮನಸ್ಸಿಗೆ ಬಂದಂತೆ ಬದಲಿಸಿರುವುದೂ ಅದಕ್ಕೆ ಸಾಕ್ಷಿ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಕೊಳಕು ರಾಜಕಾರಣದ ಭಾಗವಾಗಿ ಸಮ್ಮಿಶ್ರ ಸರ್ಕಾರ ಮೀಸಲಾತಿ ಬದಲಾಯಿಸಿದೆ ಸೆ. 3ರಂದು ಪ್ರಕಟಿಸಿದ್ದ ಮೀಸಲಾತಿ ಪಟ್ಟಿಯನ್ನೇ ಮುಂದುವರಿಸಬೇಕು’ ಎಂದರು.

‘ಚುನಾವಣೆಯಲ್ಲಿ ಅಧಿಕಾರ ಮತ್ತು ಹಣ ದುರ್ಬಳಕೆ ಮಾಡಿದರೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಹಚ್ಚಿನ ಸಂಸ್ಥೆಗಳಲ್ಲಿ ಬಹುಮತ ಗಳಿಸಲು ಸಾಧ್ಯವಾಗಿಲ್ಲ. ಈ ಪಕ್ಷಗಳ ಅಪವಿತ್ರ ಮೈತ್ರಿಯ ವಿರುದ್ಧ  ಸ್ಥಳೀಯ ಸಂಸ್ಥೆಗಳಲ್ಲಿ ಜನ ಮತ ಚಲಾಯಿಸಿದ್ದರೂ ಅಧಿಕಾರ ಹಿಡಿಯಲು ಉಭಯ ಪಕ್ಷಗಳು ಮತ್ತೆ ಹೊರಟಿವೆ’ ಎಂದು ವ್ಯಂಗ್ಯವಾಡಿದರು.

‘12 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಆರು ತಿಂಗಳುಗಳಿಂದ ವೇತನ ಪಾವತಿ ಆಗದಿರುವುದು ರಾಜ್ಯ ಸರ್ಕಾರದ ಆಡಳಿತದ ಅವ್ಯವಸ್ಥೆಗೆ ಕನ್ನಡಿ. ಶಿಕ್ಷಕರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆಶಿಕ್ಷಕರ ನೇಮಕಾತಿ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿರುವ ಗೊಂದಲಗಳಿಗೆ ಸರ್ಕಾರ ಅಂತ್ಯ ಹಾಡಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !