ದೇಶಪಾಂಡೆ ಅಲ್ಲ, ಫಟಿಂಗ ಪಾಂಡೆ: ಸುನೀಲ್‌ ವಾಗ್ದಾಳಿ

ಶನಿವಾರ, ಮಾರ್ಚ್ 23, 2019
31 °C

ದೇಶಪಾಂಡೆ ಅಲ್ಲ, ಫಟಿಂಗ ಪಾಂಡೆ: ಸುನೀಲ್‌ ವಾಗ್ದಾಳಿ

Published:
Updated:
Prajavani

ಕಾರವಾರ: ‘ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆರ್.ವಿ.ದೇಶಪಾಂಡೆ ಅಲ್ಲ. ಅವರು ಕಮಿಷನ್ ಪಾಂಡೆ, ಫಟಿಂಗ
ಪಾಂಡೆ’ ಎಂದು ಬಿಜೆಪಿ ಮುಖಂಡ ಸುನೀಲ್‌ ಹೆಗಡೆ ವಾಗ್ದಾಳಿ ನಡೆಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವರು ಸುಳ್ಳನ್ನೇ ಹೇಳುವ ಕಾರಣ ನನ್ನ ಮಾತನ್ನು ಪುನರುಚ್ಛರಿಸುತ್ತೇನೆ’ ಎಂದು ಮತ್ತದೇ ಶಬ್ದಗಳನ್ನು ಹೇಳಿದರು.

‘ದೇಶಪಾಂಡೆ ಅವರು ತಾವು ನಡೆದಿದ್ದೇ ದಾರಿ‌‌, ತಾವು ಮಾಡಿದ್ದೇ ಕಾಯ್ದೆ ಎನ್ನುತ್ತಾರೆ. ಜನರಿಗೆ ಬೇಕಾಗಿರುವುದನ್ನು ಒಂದೂ ಮಾಡುವುದಿಲ್ಲ. ಇವರ ಉಸ್ತುವಾರಿಯಲ್ಲಿ ಜಿಲ್ಲೆ ಎಲ್ಲೂ ಅಭಿವೃದ್ಧಿ ಕಂಡಿಲ್ಲ. ಕೇವಲ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದರು.

‘ಜಿಲ್ಲೆಯ ಜನರಿಗೆ ಇ- ಸ್ವತ್ತಿನಿಂದ ಸಮಸ್ಯೆ ಆಗುತ್ತಿದೆ. ಅದನ್ನು ರದ್ದು ಪಡಿಸುವುದು ಕಂದಾಯ ಸಚಿವರಾಗಿರುವ ದೇಶಪಾಂಡೆ ಅವರಿಗೆ ದೊಡ್ಡ ಕೆಲಸವೇನೂ ಅಲ್ಲ. ಆದರೆ, ಅದರಿಂದ ಅವರಿಗೆ ಸರಿಯಾಗಿ ಕಮಿಷನ್ ಬರುತ್ತಿದೆ. ಇ– ಸ್ವತ್ತು ಹೋದರೆ ತಮ್ಮ ಸ್ವ– ಸ್ವತ್ತಿಗೆ (ಆದಾಯ) ಹೊಡೆತ ಬೀಳುತ್ತದೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !