‘ಡಿಎನ್‌ಎ ಆಧಾರದಲ್ಲಿ ಟಿಕೆಟ್‌ ಕೊಡಲು ಸಾಧ್ಯವಿಲ್ಲ’–ಬಿಜೆಪಿ ನಾಯಕ ಬಿಎಲ್‌.ಸಂತೋಷ್

ಮಂಗಳವಾರ, ಏಪ್ರಿಲ್ 23, 2019
31 °C

‘ಡಿಎನ್‌ಎ ಆಧಾರದಲ್ಲಿ ಟಿಕೆಟ್‌ ಕೊಡಲು ಸಾಧ್ಯವಿಲ್ಲ’–ಬಿಜೆಪಿ ನಾಯಕ ಬಿಎಲ್‌.ಸಂತೋಷ್

Published:
Updated:
Prajavani

ಚಾಮರಾಜನಗರ: ‘ಡಿಎನ್‌ಎ, ವಂಶವಾಹಿ ಆಧಾರದಲ್ಲಿ ಟಿಕೆಟ್‌ ಕೊಡಬೇಕು ಎಂದರೆ ಹೇಗೆ. ಹಾಗೆ ಕೊಡುತ್ತಾ ಹೋದರೆ, ಪಕ್ಷದ ಸದಸ್ಯತ್ವದ ರಸೀದಿಗೆ ಬೆಲೆ ಬೇಕಲ್ಲವೇ? ಎಲ್ಲರಿಗೂ ಡಿಎನ್‌ಎ ಆಧಾರದಲ್ಲಿ ಟಿಕೆಟ್‌ ಕೊಡಿ ಎಂದು ಕೇಳುತ್ತಿದ್ದರೆ ಸರಿಯಾಗುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ‌ಹೇಳಿದರು.

ಚಾಮರಾಜನಗರದಲ್ಲಿ ಬುಧವಾರ ಸಂಜೆ ನಡೆದ ಪ್ರಬುದ್ಧರ ಗೋಷ್ಠಿಯಲ್ಲಿ ‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ದಿವಂಗತ ಅನಂತಕುಮಾರ್‌ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್‌ ಯಾಕೆ ನೀಡಲಿಲ್ಲ’ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

‘ಅನಂತಕುಮಾರ್‌ ಅವರಿಗೆ ಪಕ್ಷ, ಸಂಘಟನೆ ಏನೆಲ್ಲಾ ಗೌರವ ಕೊಡಬೇಕೋ ಅದನ್ನೆಲ್ಲವನ್ನು ಕೊಡುತ್ತದೆ. ಇನ್ನು 50 ವರ್ಷಗಳ ಬಳಿಕ ಕೇಳಿದರೂ ರಾಜ್ಯದಲ್ಲಿ ಪಕ್ಷ ಕಟ್ಟಿದವರಲ್ಲಿ ಅವರೂ ಒಬ್ಬರು ಎಂಬ ಗೌರವ ನಮಗಿರುತ್ತದೆ. ಆದರೆ, ಅದರ ಲಾಭವನ್ನು ಅವರ ಪತ್ನಿ ಪಡೆದುಕೊಳ್ಳಬೇಕು ಎಂದರೆ ಹೇಗೆ. ಅದು ಸರಿಯಾಗುವುದಿಲ್ಲ’ ಎಂದರು.

‘ತೇಜಸ್ವಿನಿಯವರು ದುಃಖದಲ್ಲಿರುವಾಗ ಅವರ ನೋವನ್ನು ಹೆಚ್ಚಿಸುವುದು ನನಗೆ ಇಷ್ಟ ಇಲ್ಲ. ಆದರೆ, ಪಕ್ಷ ಮುಂದುವರಿಯಬೇಕು. ಯುವಕರಿಗೆ ಅವಕಾಶ ಕೊಡಬೇಕು. ಇನ್ನೂ 20–30 ವರ್ಷಗಳ ರಾಜಕಾರಣ ಮಾಡಿ ತೋರಿಸುವ ವ್ಯಕ್ತಿಗೆ ಟಿಕೆಟ್‌ ಕೊಡಬೇಕು, ಪೀಳಿಗೆಯನ್ನು ಬದಲಾಯಿಸಬೇಕು ಎಂಬುದು ಪಕ್ಷದ ನಿಲುವು’ ಎಂದು ತಿಳಿಸಿದರು.

‘ತೇಜಸ್ವಿನಿ ಅವರ ಬಗ್ಗೆ ಅಗೌರವ ಇಲ್ಲ. ಆದರೆ, ಟಿಕೆಟ್‌ ತಪ್ಪಿಸಿದ್ದು ಎಂದು ಹೇಳುವುದು ಸರಿಯಲ್ಲ. ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ತೊಡಗಿಸಿಕೊ‌ಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಈಗ ನೀಡಿರುವ ಅವಕಾಶ ಬಳಸಿಕೊಂಡು ಎಷ್ಟು ಎತ್ತರಕ್ಕೆ ಬೇಕಾದರೂ ಅವರು ಬೆಳೆಯಬಹುದು’ ಎಂದರು.

ಬಿಜೆಪಿಯಲ್ಲಿ ವಂಶವಾಹಿ ಆಧಾರದ ಮೇಲೆ ಟಿಕೆಟ್‌ ಪ‍ಡೆದವರು

* ಬಿ.ಎಸ್‌.ಯಡಿಯೂರಪ್ಪ– ಪುತ್ರ ಬಿ.ವೈ.ರಾಘವೇಂದ್ರ

* ರವಿಸುಬ್ರಹ್ಮಣ್ಯ– ಅಣ್ಣನ ಮಗ ತೇಜಸ್ವಿಸೂರ್ಯ

* ಸಿ.ಎಂ. ಉದಾಸಿ– ಪುತ್ರ ಶಿವಕುಮಾರ ಉದಾಸಿ

* ಶಶಿಕಲಾ ಜೊಲ್ಲೆ– ಪತಿ ಅಣ್ಣಾ ಸಾಹೇಬ್‌ ಜೊಲ್ಲೆ

* ದಿ.ಮಲ್ಲಿಕಾರ್ಜುನಪ್ಪ– ಪುತ್ರ ಜಿ.ಎಂ.ಸಿದ್ದೇಶ್ವರ

* ಶರತ್‌ ಬಚ್ಚೇಗೌಡ– ತಂದೆ ಬಿ.ಎನ್‌.ಬಚ್ಚೇಗೌಡ

* ಅಮರೇಶ್‌ ಕರಡಿ – ತಂದೆ ಸಂಗಣ್ಣಕರಡಿ

* ಬಾಲಚಂದ್ರ ಜಾರಕಿಹೊಳಿ– ಬೀಗರು ದೇವೇಂದ್ರಪ್ಪ

ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ಲೆಕ್ಕ

* ಜಗದೀಶ ಶೆಟ್ಟರ್‌– ಸಹೋದರ ಪ್ರದೀಪ ಶೆಟ್ಟರ್‌(ವಿಧಾನ ಪರಿಷತ್‌ ಸದಸ್ಯ)

* ಮುರಗೇಶ ನಿರಾಣಿ– ಸಹೋದರ ಹಣಮಂತ ನಿರಾಣಿ

* ಅಪ್ಪಚ್ಚು ರಂಜನ್‌– ಸಹೋದರ ಸುನಿಲ್‌ ಸುಬ್ರಮಣಿ

* ಕರುಣಾಕರ್‌ ರೆಡ್ಡಿ– ಸಹೋದರ ಸೋಮಶೇಖರ್‌ ರೆಡ್ಡಿ

* ಕೆ.ಎಸ್.ಈಶ್ವರಪ್ಪ–ಪುತ್ರ ಕೆ.ಇ.ಕಾಂತೇಶ

 

ಬರಹ ಇಷ್ಟವಾಯಿತೆ?

 • 16

  Happy
 • 5

  Amused
 • 0

  Sad
 • 2

  Frustrated
 • 10

  Angry

Comments:

0 comments

Write the first review for this !