ಕರ್ನಾಟಕದಲ್ಲಿಯೂ ಬಿಜೆಪಿ ಮುನ್ನಡೆಯ ಭವಿಷ್ಯ ನುಡಿದ ಸಮೀಕ್ಷೆಗಳು

ಭಾನುವಾರ, ಜೂನ್ 16, 2019
28 °C

ಕರ್ನಾಟಕದಲ್ಲಿಯೂ ಬಿಜೆಪಿ ಮುನ್ನಡೆಯ ಭವಿಷ್ಯ ನುಡಿದ ಸಮೀಕ್ಷೆಗಳು

Published:
Updated:

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಮತ್ತೊಮ್ಮೆ ಎನ್‌ಡಿಎ ಸರ್ಕಾರದ ಭವಿಷ್ಯ ನುಡಿದಿರುವ ಚುನಾವಣೋತ್ತರ ಸಮೀಕ್ಷೆಗಳು ಕರ್ನಾಟಕದಲ್ಲಿಯೂ ಬಿಜೆಪಿ ನಿಚ್ಚಳ ಮುನ್ನಡೆ ದಾಖಲಿಸಲಿದೆ ಎಂದು ಹೇಳಿವೆ.

ಬಹುತೇಕ ಏಜೆನ್ಸಿಗಳು ಕರ್ನಾಟಕದಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿವೆ. ಜೆಡಿಎಸ್‌ ಶೂನ್ಯ ಸಂಪಾದಿಸಬಹುದು ಎನ್ನುವ ‘ಟೈಮ್ಸ್‌ ನೌ’ ಮತ್ತು ‘ಚಾಣಕ್ಯ’ ವರದಿ ಅಚ್ಚರಿ ಹುಟ್ಟಿಸಿದೆ.

ಕೆಲ ಸಮೀಕ್ಷಾ ವರದಿಗಳಲ್ಲಿ ‘ಇತರರು–1’ ಎನ್ನುವ ಉಲ್ಲೇಖವಿದೆ. ಇಲ್ಲಿ ಇತರರು ಎನ್ನುವ ಪದ ಪಕ್ಷೇತರರು ಮತ್ತು ಜೆಡಿಎಸ್‌ ಅಭ್ಯರ್ಥಿಗಳನ್ನು ಒಳಗೊಳ್ಳುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಭವಿಷ್ಯ ಏನಾಗಬಹುದು ಎನ್ನುವ ಚರ್ಚೆ ಚಾಲ್ತಿಗೆ ಬಂದಿದೆ. ಕೆಲ ಸುದ್ದಿ ವಾಹಿನಿಗಳು ಮಂಡ್ಯದಲ್ಲಿ ಸುಮಲತಾ ಗೆಲುವು ನಿರೀಕ್ಷಿತ ಎಂದು ವಿಶ್ಲೇಷಿಸುತ್ತಿವೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚುನಾವಣೆ ಘೋಷಣೆಯಾದ ನಂತರ ಬಹುತೇಕ ಪ್ರಚಾರ ಭಾಷಣಗಳಲ್ಲಿ ‘ನಾವು ರಾಜ್ಯದ 22 ಸ್ಥಾನಗಳಲ್ಲಿ ಜಯಗಳಿಸುತ್ತೇವೆ’ ಎಂದು ಹೇಳುತ್ತಿದ್ದರು. ಆದರೆ ಚಾಣಕ್ಯ ಏಜೆನ್ಸಿಯು ರಾಜ್ಯದಲ್ಲಿ ಬಿಜೆಪಿ 23 ಸ್ಥಾನ ಗೆಲ್ಲುವ ಭವಿಷ್ಯ ನುಡಿದಿದೆ. ಯಡಿಯೂರಪ್ಪ ಹೇಳುತ್ತಿದ್ದ 22 ಕ್ಷೇತ್ರಗಳು ಯಾವುವು? ಹೊಸದಾಗಿ ಪಕ್ಷಕ್ಕೆ ಒಲಿದ ಮತ್ತೊಂದು ಕ್ಷೇತ್ರ ಯಾವುದು ಎನ್ನುವ ಚರ್ಚೆ ಚಾಲ್ತಿಗೆ ಬಂದಿದೆ.

ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಎಂದು ವಿವಿಧ ಏಜೆನ್ಸಿಗಳು ಪ್ರಕಟಿಸುವ ವರದಿಯ ಅಂಕಿಅಂಶ ಇಲ್ಲಿದೆ.

ಏಜೆನ್ಸಿ ಬಿಜೆಪಿ ಕಾಂಗ್ರೆಸ್ ಇತರರು
ಟೈಮ್ಸ್‌ ನೌ 21 7 0
ಸಿವೋಟರ್ 18 9 1
ಚಾಣಕ್ಯ 23 5 0
ಇಂಡಿಯಾ ಟುಡೆ 21–25 3–6 1

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 36

  Happy
 • 7

  Amused
 • 5

  Sad
 • 3

  Frustrated
 • 6

  Angry

Comments:

0 comments

Write the first review for this !