ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕಾ ಗಾಂಧಿ 'ನಗರ ನಕ್ಸಲರ ನಾಯಕಿ': ಬಿಜೆಪಿ ಸಂಸದ ಭಗವಂತ ಖೂಬಾ ವಾಗ್ದಾಳಿ

Last Updated 27 ಡಿಸೆಂಬರ್ 2019, 7:49 IST
ಅಕ್ಷರ ಗಾತ್ರ

ಬೀದರ್: ‘ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ನಗರ ನಕ್ಸಲರ ನಾಯಕಿಯಂತೆ ಮಾತನಾಡುತ್ತಿದ್ದಾರೆ. ಅವರು ಪೌರತ್ವ ತಿದ್ದುಪಡಿ ಕಾಯ್ದೆ ದೇಶಕ್ಕೆ ಕಪ್ಪು ಚುಕ್ಕೆ ತರುವಂತಹದ್ದು ಎಂದು ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಬಿಜೆಪಿ ಸಂಸದ ಭಗವಂತ ಖೂಬಾ ವಾಗ್ದಾಳಿ ನಡೆಸಿದರು.

‘ಸಂವಿಧಾನ ನಮ್ಮ ದೇಶದ ಧರ್ಮ ಗ್ರಂಥವಾಗಿದೆ. ಬಿಜೆಪಿ ಸರ್ಕಾರ ಇವತ್ತಿಗೂ ಸಂವಿಧಾನಕ್ಕೆ ಕಪ್ಪು ಚುಕ್ಕೆ ತರುವಂತಹ ಕಾರ್ಯವನ್ನು ಮಾಡಿಲ್ಲ. ಆದರೆ ಕಾಂಗ್ರೆಸ್‌ ಸುಳ್ಳು ಆರೋಪ ಮಾಡುತ್ತಿದೆ’ ಎಂದು ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಬಿಜೆಪಿ ಸರ್ಕಾರ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಚಿಸಿಲ್ಲ. ರಾಜಕೀಯವಾಗಿ ದಿವಾಳಿ ಎದ್ದಿರುವ ಪಕ್ಷಗಳು ಮತಬ್ಯಾಂಕ್‌ ಸೃಷ್ಟಿಸಲು ಇಲ್ಲಸಲ್ಲದ ಆರೋಪಗಳನ್ನು ಆಡುತ್ತಿವೆ’ ಎಂದರು.

ದೇಶದ ಜನ ಕಾಂಗ್ರೆಸ್‌ನ ಪ್ರಚೋದನೆಗೆ ಒಳಗಾಗಬಾರದು. ಸ್ವಾಂತತ್ರ ಪೂರ್ವದಲ್ಲಿ ಧರ್ಮದ ಆಧಾರದಲ್ಲಿ ವಿಭಜನೆಯಾಗಿದೆ. ಆದರೆ ಈಗ ಧರ್ಮದ ಹೆಸರಲ್ಲಿ ಪೌರತ್ವ ನೋಂದಣಿ ಮಾಡಿಕೊಳ್ಳುವುದಿಲ್ಲ; ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT