ರಂಗಪ್ಪ ನೇಮಕಕ್ಕೆ ಬಿಜೆಪಿ ವಿರೋಧ

7
ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ: ಜಿ.ಟಿ.ದೇವೇಗೌಡ ಸಮರ್ಥನೆ

ರಂಗಪ್ಪ ನೇಮಕಕ್ಕೆ ಬಿಜೆಪಿ ವಿರೋಧ

Published:
Updated:

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರರನ್ನಾಗಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರನ್ನು ನೇಮಕ ಮಾಡಬಾರದು ಎಂದು ಆಗ್ರಹಿಸಿ ಬಿಜೆಪಿ ನಿಯೋಗವು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಶನಿವಾರ ಮನವಿ ಸಲ್ಲಿಸಿತು.

‘ಅಂತಹ ಪ್ರಸ್ತಾಪ ಇಲಾಖೆಯ ಮುಂದಿಲ್ಲ. ರಂಗಪ್ಪ ದೊಡ್ಡ ವಿಜ್ಞಾನಿ. ಅವರ ಮೇಲೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ತಪ್ಪು ಮಾಡಿದ್ದರೆ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆ ಆಗುತ್ತದೆ’ ಎಂದು ಜಿ.ಟಿ. ದೇವೇಗೌಡ ಸಮರ್ಥಿಸಿಕೊಂಡರು. ‘ರಂಗಪ್ಪ ಸೇರಿದಂತೆ ಎಲ್ಲ ಶಿಕ್ಷಣ ತಜ್ಞರ ಸಲಹೆ ಪಡೆಯುತ್ತೇನೆ. ಇನ್ಫೊಸಿಸ್‌, ವಿಪ್ರೊ ತಜ್ಞರ ನೆರವನ್ನೂ ಪಡೆಯುತ್ತೇನೆ. ಆರು ತಿಂಗಳಲ್ಲಿ ಆಮೂಲಾಗ್ರ ಸುಧಾರಣೆ ತರುತ್ತೇನೆ’ ಎಂದರು.

‘ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ 2013–14ನೇ ಸಾಲಿನಿಂದಲೇ ಮಾನ್ಯತೆ ಕಳೆದುಕೊಂಡಿದೆ. ಇದುವರೆಗೆ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಸಿಕ್ಕಿಲ್ಲ. ಅಂದಿನಿಂದ ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಯದೆ ವಿಶ್ವವಿದ್ಯಾಲಯ ಕೋಮಾ ಸ್ಥಿತಿಯಲ್ಲಿದೆ. 2009ರಲ್ಲಿ ರಂಗಪ್ಪ ಕುಲಪತಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ನಂತರ ಬಂದ ಪ್ರೊ.ಎಂ.ಜೆ.ಕೃಷ್ಣನ್‌ ಅವರೂ ರಂಗಪ್ಪ ಮಾತಿನಂತೆ ನಡೆದುಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿಗೆ ಅವರಿಬ್ಬರೇ ಕಾರಣ’ ಎಂದು ವಿಧಾನ ಪರಿಷತ್‌ ಸದಸ್ಯರಾದ ಎನ್‌.ರವಿಕುಮಾರ್‌, ಅರುಣ್‌ ಶಹಾಪುರ ಮನವಿಯಲ್ಲಿ ತಿಳಿಸಿದ್ದಾರೆ.

‘ಇದರ ಬಗ್ಗೆ ತನಿಖೆ ನಡೆಸಿದ ನಿವೃತ್ತ ನ್ಯಾಯಾಧೀಶ ಭಕ್ತವತ್ಸಲಂ ವರದಿ ನೀಡಿದ್ದಾರೆ. ಎಲ್ಲ ಪಕ್ಷಗಳ ಸದಸ್ಯರನ್ನು ಒಳಗೊಂಡ ವಿಧಾನಮಂಡಲದ ಹಕ್ಕು ಬಾಧ್ಯತಾ ಸಮಿತಿಯೂ ರಂಗಪ್ಪ ವಿರುದ್ಧ ವರದಿ ನೀಡಿದೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !