ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮುಲು ಸಂಧಾನವೂ ವಿಫಲ

ಬಿಜೆಪಿ ಬಂಡಾಯ ಅಭ್ಯರ್ಥಿ ಇಂದು ನಾಮಪತ್ರ
Last Updated 17 ನವೆಂಬರ್ 2019, 18:09 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಆನಂದ್‌ ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದಕ್ಕೆ ಅಸಮಾಧಾನಗೊಂಡು ಮುನಿಸಿಕೊಂಡಿರುವ ಪಕ್ಷದ ಹಿರಿಯ ಮುಖಂಡ ಕವಿರಾಜ ಅರಸ್‌ ಜತೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಭಾನುವಾರ ನಡೆಸಿದ ಸಂಧಾನ ವಿಫಲಗೊಂಡಿದೆ.

ಶ್ರೀರಾಮುಲು ಅವರು ಕವಿರಾಜ ಅರಸ್‌ ಮನೆಗೆ ಹೋಗಿ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಮನವೊಲಿಸುವ ಕೆಲಸ ಮಾಡಿದರು. ಆದರೆ, ಅರಸ್‌ ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ. ಹೀಗಾಗಿ ಶ್ರೀರಾಮುಲು ಅಸಹಾಯಕರಾಗಿ ವಾಪಸಾದರು.

‘ಬಿಜೆಪಿ ಮುಖಂಡರು ನಿಮ್ಮನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಮಾಡಲಿಲ್ಲ. ಅದರ ವಿರುದ್ಧ ಧ್ವನಿ ಎತ್ತಿದೆ. ಈಗ ನನಗೂ ಅನ್ಯಾಯ ಮಾಡಿದ್ದಾರೆ. ನನ್ನ ಪರ ನೀವು ಧ್ವನಿ ಎತ್ತಬೇಕು. ಒಂದುವೇಳೆ ಟಿಕೆಟ್‌ ಕೊಡದಿದ್ದರೆ ಸೋಮವಾರ (ನ.18) ಪಕ್ಷೇತರನಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ’ ಎಂದು ಅರಸ್‌ ಕಡ್ಡಿ ಮುರಿದಂತೆ ಹೇಳಿದರು.

ಶ್ರೀರಾಮುಲು ಪ್ರತಿಕ್ರಿಯಿಸಿ, ‘ಅರಸ್‌ ಅವರಿಗೆ ಸ್ವಲ್ಪ ಅಸಮಾಧಾನವಿದೆ. ಅವರ ಮನವೊಲಿಸುತ್ತೇವೆ. ಅವರು ಹಾಗೂ ಎಚ್‌.ಆರ್‌. ಗವಿಯಪ್ಪನವರು ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದೇ ಬರುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಶನಿವಾರ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರು ಅರಸ್‌ ಅವರ ಮನವೊಲಿಸುವ ವಿಫಲ ಪ್ರಯತ್ನ ನಡೆಸಿದರು. ಗವಿಯಪ್ಪನವರನ್ನು ಪಕ್ಷ ಕ್ಷೇತ್ರದ ಉಸ್ತುವಾರಿ ಮಾಡಿದರೂ ಅವರು ಕ್ಷೇತ್ರದತ್ತ ಸುಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT