ಬುಧವಾರ, ಜನವರಿ 22, 2020
19 °C
ಉಲ್ಟಾ ಹೊಡೆಯುತ್ತಿರುವ ಸಿದ್ದರಾಮಯ್ಯ

ಆಪರೇಷನ್‌ ಕಮಲ ಮಾಡಿಲ್ಲ, ಮಾಡಲ್ಲ: ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನಮ್ಮ ಪಕ್ಷ ಹಿಂದೆಯೂ ಆಪರೇಷನ್‌ ಕಮಲ ಮಾಡಿಲ್ಲ; ಮುಂದೆಯೂ ಮಾಡುವುದಿಲ್ಲ. ತಮ್ಮ ಪಕ್ಷದವರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ನವರಿಗೆ ಸಾಧ್ಯವಾಗದಿದ್ದರೆ ನಾವೇನು ಮಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಸಾಂಸ್ಥಿಕ ಚುನಾವಣಾ ವೀಕ್ಷಕರ ಸಭೆಯಲ್ಲಿ ಪಾಲ್ಗೊಳ್ಳಲು ಬಂದಾಗ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ‘ಬಿಜೆಪಿ ಎರಡನೇ ಹಂತದಲ್ಲಿ ಆಪರೇಷನ್‌ ಕಮಲ ಮಾಡಲಿದೆಯೇ’ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

‘ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಬರುವ ಎಲ್ಲ ಕಾರ್ಯಕರ್ತರು ಹಾಗೂ ನಾಯಕರನ್ನು ಸ್ವಾಗತಿಸುತ್ತೇವೆ. ದಿನೇಶ ಗುಂಡೂರಾವ್ ಮೊದಲು ತಮ್ಮ ಪಕ್ಷದ ಶಾಸಕರ ವಿಶ್ವಾಸ ಉಳಿಸಿ ಕೊಳ್ಳುವ ಕೆಲಸ ಮಾಡಲಿ. ಆ ಪಕ್ಷದ ಶಾಸಕರೇ ದುಃಖಿತರಾಗಿ ಬಂದರೆ ನಾವೇನು ಮಾಡಬೇಕು?’ ಎಂದರು.

ಉಲ್ಟಾ ಹೊಡೆಯುತ್ತಿರುವ ಸಿದ್ದರಾಮಯ್ಯ 

ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ‘ಕೂಸು ಹುಟ್ಟುವ ಮುನ್ನವೇ ಕಾಂಗ್ರೆಸ್‌ ಕುಲಾವಿ ಹೊಲಿಸಿದೆ. ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕಿಂತ ಮೊದಲೇ ಯಾರು ಸಿ.ಎಂ. ಆಗಬೇಕೆಂದು ಅವರಲ್ಲಿ ಚರ್ಚೆ ನಡೆಯುತ್ತಿದೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದ ಸಿದ್ದರಾಮಯ್ಯ ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಸಿ.ಎಂ. ಆಗುತ್ತೇನೆ ಎಂದು ಹೇಳಿಯೇ ಇಲ್ಲ ಎನ್ನುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು