ಮಹಿಳೆಯರಿಗೆ ಸಮಾನತೆ ಬೇಡ: ಭಾರತಿ ಶೆಟ್ಟಿ

7
ಯಡಿಯೂರಪ್ಪ ಮಹಾಪರಾಧ ಮಾಡಿಲ್ಲ

ಮಹಿಳೆಯರಿಗೆ ಸಮಾನತೆ ಬೇಡ: ಭಾರತಿ ಶೆಟ್ಟಿ

Published:
Updated:
Prajavani

ಮೈಸೂರು: ‘ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನಳಲ್ಲ. ಅವಳಿಗೆ ಸಮಾನತೆ ಬೇಕಿಲ್ಲ’ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ಇಲ್ಲಿ ಮಂಗಳವಾರ ಪ್ರತಿಪಾದಿಸಿದರು.

ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಸಮರ್ಥಿಸಿಕೊಂಡರು. ‘ಸಾಂಪ್ರದಾಯಿಕ, ಧಾರ್ಮಿಕವಾಗಿ ಮಹಿಳೆಗೆ ಕೆಲವು ಇತಿಮಿತಿಗಳಿವೆ. ಶಬರಿಮಲೆಗೆ ಮಹಿಳೆ ಪ್ರವೇಶಿಸದಿದ್ದರೆ ಅವಳಿಗೆ ಯಾವ ನಷ್ಟವೂ ಇಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುರುಷರು ಬಾರ್‌ಗಳಿಗೆ ಹೋಗಿ ಮದ್ಯಪಾನ ಮಾಡುತ್ತಾರೆ. ಅದಕ್ಕೆ ಸರಿಸಮಾನವಾಗಿ ಮಹಿಳೆಯರೂ ಮದ್ಯಪಾನ ಮಾಡಬೇಕು ಎಂದು ನಾನು ಹೇಳಲಾರೆ. ಅಂತಹ ಸಮಾನತೆ ಮಹಿಳೆಗೆ ಏಕೆ ಬೇಕು ಎಂದು ಪ್ರಶ್ನಿಸಿದರು.

ಮಹಾಪರಾಧವಲ್ಲ: ಬಿ.ಎಸ್‌.ಯಡಿಯೂರಪ್ಪ ಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ಅವರೇನೂ ಮಾಡಬಾರದ ಅಪರಾಧ ಮಾಡಿಲ್ಲ. ಇವೆಲ್ಲಾ ಸಹಜ. ಹಿಂದೆಯೂ ಸಾಕಷ್ಟು ರಾಜಕಾರಣಿಗಳು ಮಾಡಿದ್ದಾರೆ, ಮುಂದೆಯೂ ಮಾಡುತ್ತಾರೆ. ಇದರಿಂದ ಬಿಜೆಪಿಯ ಯಾವ ಕಾರ್ಯಕರ್ತರೂ ವಿಚಲಿತರಾಗಿಲ್ಲ’ ಎಂದು ಹೇಳಿದರು.

‘ತ್ರಿವಳಿ ತಲಾಖ್‌ ವಿಚಾರವನ್ನು ಬಿಜೆಪಿ ಸಮರ್ಥಿಸಿಕೊಂಡಿರುವುದು ಸರಿಯಾಗಿದೆ. ಅದರಲ್ಲಿ ಮುಸ್ಲಿಂ ಮಹಿಳೆಯರ ಬಾಳಿನ ಪ್ರಶ್ನೆ ಇದೆ’

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !