ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಇಆರ್‌ಟಿ ಪಠ್ಯ ಪುಸ್ತಕ ಅನುವಾದ: ಬಿಕೆಸಿ ಅಸಮಾಧಾನ

Last Updated 22 ಫೆಬ್ರುವರಿ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣದ ರಾಜ್ಯಗಳ ಉಜ್ವಲ ಚರಿತ್ರೆ ಮತ್ತು ಸಂಸ್ಕೃತಿಯ ವಿಷಯವನ್ನು ಹೊಂದಿಲ್ಲದ ಎನ್‌ಸಿಇಆರ್‌ಟಿಯ ಪಠ್ಯ ಪುಸ್ತಕವನ್ನು ಅನುವಾದಿಸುವ ಆಲೋಚನೆ ಬಂದಿದ್ದಾದರೂ ಹೇಗೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್‌ ಪ್ರಶ್ನಿಸಿದ್ದಾರೆ.

ಎನ್‌ಸಿಇಆರ್‌ಟಿ ತಯಾರಿಸಿದ 6 ನೇ ತರಗತಿ ಸಮಾಜವಿಜ್ಞಾನ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಮತ್ತು ದಕ್ಷಿಣ ಭಾರತ ಇತಿಹಾಸ, ಸಂಸ್ಕೃತಿ ವಿಷಯ ಇಲ್ಲದಿರುವುದು ಆಶ್ಚರ್ಯ ಉಂಟು ಮಾಡಿಲ್ಲ. ಆದರೆ, ಅದನ್ನು ಆಯ್ಕೆ ಮಾಡಿದ್ದು ಸರಿ ಎಷ್ಟರ ಮಟ್ಟಿಗೆ ಸರಿ. ಈ ಪುಸ್ತಕವನ್ನು ಅನುವಾದ ಮಾಡಲು ಒಪ್ಪದ ಇಬ್ಬರು ಉಪನ್ಯಾಸಕರ ನಡೆ ಅಭಿನಂದನೀಯ ಎಂದು ಪ್ರಕಟಣೆಯಲ್ಲಿ ಚಂದ್ರಶೇಖರ್‌ ತಿಳಿಸಿದ್ದಾರೆ.

ಉಪನ್ಯಾಸಕರ ಕಳಕಳಿ ಶಿಕ್ಷಣ ಇಲಾಖೆಯ ಮಧ್ಯಮ ಹಂತದ ಅಧಿಕಾರಿಗಳಲ್ಲೂ ಇರಬೇಕಿತ್ತು. ಉನ್ನತ ಶಿಕ್ಷಣದಲ್ಲೂ ಇದೇ ಪ್ರವೃತ್ತಿ ಇದೆ. ಸರ್ಕಾರಕ್ಕೂ ವಿಶ್ವವಿದ್ಯಾಲಯಗಳ ಮಧ್ಯೆ ಸ್ವಾಯತ್ತ ಸಂಸ್ಥೆಯೊಂದನ್ನು ನೇಮಿಸಬೇಕು ಎಂಬ ಕಾರಣಕ್ಕೆ ಯುಜಿಸಿ ಅಸ್ತಿತ್ವಕ್ಕೆ ಬಂದಿತು. ಆದರೆ, ಈಗಿನ ಸರ್ಕಾರ ಅದನ್ನು ತೆಗೆದು ತನ್ನ ಅಧೀನದಲ್ಲೇ ಇರುವ ಉನ್ನತ ಶಿಕ್ಷಣ ಮಂಡಳಿಯನ್ನು ತಂದಿದೆ. ಇದರಿಂದ ಶೈಕ್ಷಣಿಕ ಸ್ವಾಯತ್ತತೆಗೇ ಅಪಾಯ ಬಂದಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT