ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷ ಕಳೆದರೂ ನೇಮಕಾತಿ ಆಗಿಲ್ಲ!

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹುದ್ದೆ: ಉತ್ತರ ಭಾರತದ ವಿ.ವಿ.ಗಳಿಂದ ಬಾರದ ದೃಢೀಕರಣ ಪತ್ರ
ಅಕ್ಷರ ಗಾತ್ರ

ಧಾರವಾಡ: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 62 ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹುದ್ದೆಗೆ ಅರ್ಜಿ ಹಾಕಿದವರ ಅಂಕಪಟ್ಟಿಗಳನ್ನು ದೃಢೀಕರಿಸಲು ಉತ್ತರ ಭಾರತದ ಕೆಲ ವಿಶ್ವವಿದ್ಯಾಲಯಗಳು ನಿರಾಸಕ್ತಿ ತೋರಿದ್ದರಿಂದ ಎರಡು ವರ್ಷ ಕಳೆದರೂ ಈ ಹುದ್ದೆಗಳು ಭರ್ತಿಯಾಗಿಲ್ಲ.

ಅಂಕಗಳ ಆಧಾರದ ಮೇಲೆ ಈ ಹುದ್ದೆಗೆ ನೇರ ನೇಮಕಾತಿ ಮಾಡುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು. ಅರ್ಜಿ ಸಲ್ಲಿಸಿದವರ ಅಂಕಪಟ್ಟಿ ದೃಢೀಕರಿಸಲು ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಗೆ ಇಲಾಖೆ ಕೋರಿತ್ತು. ರಾಜ್ಯದ ವಿಶ್ವವಿದ್ಯಾಲಯಗಳು ಅಂಕಪಟ್ಟಿಗಳನ್ನು ದೃಢೀಕರಿಸಿವೆ. ಆದರೆ ಉತ್ತರ ಭಾರತದ ಕೆಲವು ವಿಶ್ವವಿದ್ಯಾಲಯಗಳು ಈವರೆಗೂ ಆ ಕೆಲಸ ಮಾಡಿಲ್ಲ.

ಸಮಾಜ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸೇರಿದಂತೆ, ಶುಶ್ರೂಷಕರು, ಕಿರಿಯ ಆರೋಗ್ಯ ಸಹಾಯಕರು, ನೇತ್ರಾಧಿಕಾರಿ, ವೈದ್ಯಕೀಯ ದಾಖಲಾತಿ ತಂತ್ರಜ್ಞ, ಕಿರಿಯ ವೈದ್ಯಕೀಯ ರೇಡಿಯಾಲಜಿಸ್ಟ್‌ ತಂತ್ರಜ್ಞ ಸೇರಿದಂತೆ ಒಟ್ಟು 3,274 ಅರೆ ವೈದ್ಯಕೀಯ ಹುದ್ದೆಗಳಿಗೆ ಇಲಾಖೆಯ ವಿಶೇಷ ನೇಮಕಾತಿ ಸಮಿತಿ 2017ರ ಜೂನ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಪೈಕಿ ಆರೋಗ್ಯ ಶಿಕ್ಷಣಾಧಿಕಾರಿ ಹುದ್ದೆಯನ್ನು ಹೊರತುಪಡಿಸಿ, ಉಳಿದ ಹುದ್ದೆಗಳ ನೇಮಕಾತಿ ಪೂರ್ಣಗೊಂಡಿದೆ.

‘ನೇಮಕಾತಿ ಪ್ರಕ್ರಿಯೆ ಕುರಿತು ನಿರಂತರವಾಗಿ ಇಲಾಖೆಯನ್ನು ಸಂಪರ್ಕಿಸುತ್ತಲೇ ಇದ್ದೇವೆ. ಅಂಕಪಟ್ಟಿ ಪರಿಶೀಲನೆಗೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲಾಗಿದೆ ಎಂದಷ್ಟೇ ಅಲ್ಲಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಅದು ಬಿಟ್ಟು ಏನೂ ಆಗಿಲ್ಲ’ ಎಂದು ಆಕಾಂಕ್ಷಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ‘ನಕಲಿ ಅಂಕಪಟ್ಟಿಗಳಿಂದಾಗಿ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಇಲಾಖೆಯು ಈ ಕ್ರಮಕೈಗೊಂಡಿದೆ. ಅಭ್ಯರ್ಥಿಗಳ ಅಂಕಪಟ್ಟಿಯನ್ನು ದೃಢೀಕರಿಸುವಂತೆ ಪದವಿ ನೀಡಿದ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT