ಬಲೆಗೆ ಬಿದ್ದ ‘ಬ್ಲೂ ಸ್ಪೈನ್ ಯೂನಿಕಾರ್ನ್’ ಮೀನು

7

ಬಲೆಗೆ ಬಿದ್ದ ‘ಬ್ಲೂ ಸ್ಪೈನ್ ಯೂನಿಕಾರ್ನ್’ ಮೀನು

Published:
Updated:
Prajavani

ಕಾರವಾರ: ದೇಶದ ಪಶ್ಚಿಮ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ‘ಬ್ಲೂ ಸ್ಪೈನ್ ಯೂನಿಕಾರ್ನ್ ಫಿಶ್’, ನಗರ ಸಮೀಪದ ದೇವಭಾಗದಲ್ಲಿ ಗುರುವಾರ ಕಂಡುಬಂದಿದೆ. 

ಕಾಡುಹಂದಿಯನ್ನು ಹೋಲುವ ಮುಖ, ಅದರ ಮೇಲೊಂದು ಕೊಂಬು, ಬೆನ್ನಿನ ಭಾಗದಲ್ಲಿ ಮುಳ್ಳುಗಳಿರುವ ಈ ಮೀನು ಇದೇ ಮೊದಲ ಬಾರಿಗೆ ಮೀನುಗಾರರ ಬಲೆಗೆ ಬಿದ್ದಿದೆ. ಈ ಪ್ರಭೇದದ ಮೀನುಗಳು ಶಾಂತ ಮಹಾಸಾಗರದ ವ್ಯಾಪ್ತಿಯಲ್ಲಿರುವ ಆಸ್ಟ್ರೇಲಿಯಾ, ಜಪಾನ್‌ ಸುತ್ತಮುತ್ತ ಸಾಮಾನ್ಯವಾಗಿ ಕಂಡುಬರುತ್ತವೆ.

ಈ ಬಗ್ಗೆ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಶಿವಕುಮಾರ ಹರಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇರಳ ಭಾಗದಲ್ಲಿ ಈ ಮೀನು ಕಂಡುಬಂದ ಮಾಹಿತಿಯಿಲ್ಲ. 80ರ ದಶಕದಲ್ಲಿ ಶ್ರೀಲಂಕಾ ಮತ್ತು ಲಕ್ಷದ್ವೀಪಗಳ ಸುತ್ತಮುತ್ತ ಕಂಡುಬಂದಿತ್ತು. ಹಿಂದೂ ಮಹಾಸಾಗರದ ಹವಳದ ದಂಡೆಗಳಿರುವ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾಗಿ ದಾಖಲೆಗಳಲ್ಲಿ ಉಲ್ಲೇಖವಿದೆ. ಇದರಲ್ಲಿ ಮತ್ತೊಂದು ಜಾತಿಯ ಮೀನು ಓಮನ್‌ ದೇಶದಲ್ಲಿ ಕೆಲವು ವರ್ಷಗಳ ಹಿಂದೆ ಪತ್ತೆಯಾಗಿತ್ತು’ ಎಂದು ತಿಳಿಸಿದರು.

ಸಮುದ್ರಪಾಚಿ ಆಹಾರ: ‘ವೈಜ್ಞಾನಿಕವಾಗಿ ನಾಸೋ ಯೂನಿಕಾರ್ನ್‌ ಎಂದು ಕರೆಯಲಾಗುವು ಇವುಗಳಿಗೆ ಸಮುದ್ರ ಕಳೆಯೇ (ಆಲ್ಗೆ) ಆಹಾರ. ಕಾರವಾರದ ಮಾಜಾಳಿ, ದೇವಭಾಗ ಭಾಗದಲ್ಲಿ ಕಳೆ ಬೆಳೆಯುತ್ತದೆ. ಹಾಗಾಗಿ ಆಹಾರ ಅರಸುತ್ತ ಇಲ್ಲಿಗೆ ಬಂದಿರುವ ಸಾಧ್ಯತೆಯಿದೆ. ಮೀನುಗಾರರಿಗೂ ಈ ಮೀನಿನ ಮಾಹಿತಿ ಇರಲಿಲ್ಲ. ನೋಡಲು ವಿಶಿಷ್ಟವಾಗಿರುವ ಇದನ್ನು ಅಕ್ವೇರಿಯಂಗಳಲ್ಲಿ ಸಾಕುತ್ತಾರೆ. ಆಹಾರಕ್ಕೂ ಬಳಕೆ ಮಾಡುತ್ತಾರೆ. ಸುಮಾರು 50 ಸೆಂಟಿಮೀಟರ್‌ಗಳವರೆಗೆ ಬೆಳೆಯುತ್ತವೆ’ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !