ಶುಕ್ರವಾರ, ನವೆಂಬರ್ 15, 2019
22 °C

ಜಯದೇವ ಜಂಕ್ಷನ್ ಕಾಮಗಾರಿ ಪರಿಶೀಲನೆ

Published:
Updated:
Prajavani

ಬೆಂಗಳೂರು: ಬನ್ನೇರುಘಟ್ಟ ರಸ್ತೆ ಜಯದೇವ ಜಂಕ್ಷನ್‌ನಲ್ಲಿ ಮೆಟ್ರೊ ಇಂಟರ್‌ಚೇಂಜ್ ನಿಲ್ದಾಣ ನಿರ್ಮಾಣಕ್ಕೆ ಶೀಘ್ರವೇ ಪೂರ್ಣ ಪ್ರಮಾಣದ ಕಾಮಗಾರಿ ಆರಂಭವಾಗಲಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮದ(ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರು ಕಾಮಗಾರಿ ಸಂಬಂಧ ಶುಕ್ರವಾರ ಜಂಟಿ ಪರಿಶೀಲನೆ ನಡೆಸಿದರು.

ಗೊಟ್ಟಿಗೆರೆ– ನಾಗವಾರ ಮಾರ್ಗ ಹಾಗೂ ಆರ್‌.ವಿ.ರಸ್ತೆ– ಸಿಲ್ಕ್‌ಬೋರ್ಡ್‌ ಮೆಟ್ರೊ ಮಾರ್ಗಗಳು ಇಲ್ಲಿ ಪರಸ್ಪರ ಸಂಧಿಸಲಿವೆ. ಈ ಎರಡು ಎತ್ತರಿಸಿದ ಮಾರ್ಗಗಳು ಹಾಗೂ ಮೂರು ಗ್ರೇಡ್‌ ಸೆಪರೇಟರ್‌ಗಳನ್ನು ಒಳಗೊಂಡ ಐದು ಹಂತಗಳ ಸಂಚಾರ ವ್ಯವಸ್ಥೆ ಇಲ್ಲಿ ನಿರ್ಮಾಣವಾಗಲಿದೆ.

‘ಬಿಬಿಎಂ‌ಪಿ ಮತ್ತು ಬಿಎಂಆರ್‌ಸಿಎಲ್‌ ತಲಾ ಶೇ 50ರಷ್ಟು ಕಾಮಗಾರಿಗಳನ್ನು ನಿರ್ವಹಿಸಲಿವೆ. ಹೀಗಾಗಿ ಜಂಟಿಯಾಗಿ ಪರಿಶೀಲನೆ ನಡೆಸಲಾಯಿತು’ ಎಂದು ಬಿ.ಎಚ್. ಅನಿಲ್‌ಕುಮಾರ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)