ಕೊಟ್ಟ ನೀರನ್ನು ಬಳಸಿ, ಕಾನೂನು ಹೋರಾಟ ಮುಂದುವರಿಸಿ

7
‘ಮಹದಾಯಿ’ ತೀರ್ಪು: ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸಲಹೆ

ಕೊಟ್ಟ ನೀರನ್ನು ಬಳಸಿ, ಕಾನೂನು ಹೋರಾಟ ಮುಂದುವರಿಸಿ

Published:
Updated:
Deccan Herald

ಹಾವೇರಿ:  ಈ ತೀರ್ಪಿನಲ್ಲಿ ರಾಜ್ಯಕ್ಕೆ ಪೂರ್ಣ ಪ್ರಮಾಣದ ನ್ಯಾಯ ಸಿಕ್ಕಿಲ್ಲ. ಆದರೆ, ಈಗ ನೀಡಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸುವ ಸಲುವಾಗಿ ರಾಜ್ಯ ಸರ್ಕಾರವು ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು. ಅದರ ಜೊತೆಗೆ, ಹೆಚ್ಚುವರಿ ನೀರಿಗಾಗಿ ಕಾನೂನಾತ್ಮಕ ಹೋರಾಟ ಮುಂದುವರಿಸಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಮಹದಾಯಿ ತೀರ್ಪಿನ ಕುರಿತು ಪ್ರತಿಕ್ರಿಯಿಸಿದರು.

ಮಾಜಿ ಜಲಸಂಪನ್ಮೂಲ ಸಚಿವರಾದ ಅವರು ಪ್ರಜಾವಾಣಿ ಜೊತೆ ಮಾತನಾಡಿ, ‘ಇದು, ರಾಜ್ಯದ ಪ್ರಮುಖ ಯೋಜನೆಯಾಗಿದೆ. ನೀರಿನ ಶಾಶ್ವತ ಹಕ್ಕನ್ನು ನಾವು ಪಡೆದುಕೊಳ್ಳದಿದ್ದರೆ, ರಾಜ್ಯಕ್ಕೆ ಮಾರಕ ಆಗುತ್ತದೆ. ಹೀಗಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

ನೀರಿನ ಹಕ್ಕಿನ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸಬೇಕು. ನಾವೂ ಹೆಚ್ಚಿನ ನೀರು ತರಲು ಎಲ್ಲ ರೀತಿಯ ಪ್ರಯತ್ನ ಹಾಗೂ ಹೋರಾಟ ಮುಂದುವರಿಸುತ್ತೇವೆ ಎಂದ ಅವರು, ‘2006 ಮತ್ತು 20008ರಲ್ಲಿ ನಾವು ಕಳಸಾ ಕಾಮಗಾರಿಗೆ ಚಾಲನೆ ನೀಡಿದ ಪರಿಣಾಮವಾಗಿ ಈಗ 4 ಟಿಎಂಸಿ ನೀರು ಸಿಕ್ಕಿದೆ. ಇಲ್ಲದಿದ್ದರೆ, ಅದೂ ಸಿಗುತ್ತಿರಲಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !