ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಸದ್ದಿಗೆ ಚಂಡಮಾರುತ ಕಾರಣ !

ಸದ್ದು ಯುದ್ಧ ವಿಮಾನದ್ದೂ ಅಲ್ಲ, ಭೂಕಂಪದ್ದೂ ಅಲ್ಲ – ವಿಜ್ಞಾನಿ ಪ್ರತಿಪಾದನೆ
Last Updated 24 ಮೇ 2020, 19:10 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ಮೇ 20ರಂದು ಮಧ್ಯಾಹ್ನ ಭಾರಿ ಸದ್ದು ಕೇಳಿಸಿದ್ದಕ್ಕೆ ಯುದ್ಧವಿಮಾನ ಕಾರಣ ಎಂದು ರಕ್ಷಣಾ ಇಲಾಖೆ ಹೇಳಿತ್ತು. ಆದರೆ, ಇದನ್ನು ಬಲವಾಗಿ ಅಲ್ಲಗಳೆದಿರುವ ಹಿರಿಯ ಭೂವಿಜ್ಞಾನಿ ಡಾ.ಎಚ್.ಎಸ್.ಎಂ. ಪ್ರಕಾಶ್ ಈ ಸದ್ದು ಮೊಳಗುವುದಕ್ಕೆ ಅಂಪನ್‌ ಚಂಡಮಾರುತವೇ ಕಾರಣ ಎಂದು ಪ್ರತಿಪಾದಿಸಿದ್ದಾರೆ.

‘ನಗರದಲ್ಲಿ ಭಾರಿ ಶಬ್ದ ಕೇಳಿಸಿದ ಮರುದಿನ ಮಾಗಡಿ, ಪಾಂಡವಪುರ, ನೆಲಮಂಗಲದಲ್ಲಿಯೂ 9 ಸೆಕೆಂಡ್‌ಗೂ ಹೆಚ್ಚು ಹೊತ್ತು ಭಾರಿ ಸದ್ದು ಕೇಳಿಸಿದೆ. ಯುದ್ಧವಿಮಾನ ಹಾರಾಡಿದ್ದು ಇದಕ್ಕೆ ಕಾರಣವಲ್ಲ. ಅಂಪನ್‌ ಚಂಡಮಾರುತದ ಪರಿಣಾಮದಿಂದ ಈ ವಿದ್ಯಮಾನ ಘಟಿಸಿದೆ’ ಎನ್ನುತ್ತಾರೆ ಪ್ರಕಾಶ್.

ಎಚ್.ಎಸ್.ಎಂ. ಪ್ರಕಾಶ್

‘ಚಂಡಮಾರುತಗಳು ಸುತ್ತಮುತ್ತಲಿನ ತೇವಾಂಶವನ್ನು ಹೀರಿಕೊಂಡು ಚಲಿಸುವಾಗ ನಿರ್ವಾತ ಉಂಟಾಗುತ್ತದೆ. ಇದರಿಂದ ವಾತಾವರಣದಲ್ಲಿ ಒತ್ತಡ ಮತ್ತು ತೇವಾಂಶದಲ್ಲಿ ಏರಿಳಿತವಾಗಿ ಈ ರೀತಿಯ ಶಬ್ದ ಕೇಳಿಸುತ್ತದೆ’ ಎಂದು ಅವರು ವಿವರಿಸಿದರು.

‘ವಾತಾವರಣದಲ್ಲಿನ ಈ ಏರಿಳಿತದ ಪರಿಣಾಮ ನಗರದಲ್ಲೂ ಕಂಡುಬಂದಿದ್ದರಿಂದ ರೀತಿ ಶಬ್ದ ಕೇಳಿಸಿದೆ. ಮೇ 20ರ ಬೆಳಿಗ್ಗೆನಗರದಲ್ಲಿ ಬೆಳಿಗ್ಗೆ 7ಗಂಟೆಗೇ ವಿಪರೀತ ಧಗೆ ಇತ್ತು. ಇದನ್ನೂ ಗಮನಿಸಬೇಕು. ಬಲೂನ್‌ ಒಳಗೆ ಒತ್ತಡದಲ್ಲಿ ಗಾಳಿಯನ್ನು ತುಂಬಿಸಲಾಗಿರುತ್ತದೆ. ಅದು ಒಡೆದು ಗಾಳಿ ಹೊರಬಂದಾಗ ದೊಡ್ಡ ಶಬ್ದ ಕೇಳುತ್ತದೆ. ಈ ಪ್ರಕ್ರಿಯೆಯೂ ಅದೇ ಮಾದರಿಯದ್ದು’ ಎಂದು ಉದಾಹರಣೆ ನೀಡಿದರು.

ಚಂಡಮಾರುತಕ್ಕೆ ಕಾರಣ ಜ್ವಾಲಾಮುಖಿ:

‘ಆಂಧ್ರಪ್ರದೇಶದ ಪೂರ್ವ ಭಾಗದಲ್ಲಿ ಸುತ್ತುತ್ತಿದ್ದ ಚಂಡಮಾರುತಸುತ್ತ–ಮುತ್ತಲಿನ 200 ಕಿ.ಮೀ.ನಿಂದ 300 ಕಿ.ಮೀ.ವರೆಗಿನ ಪ್ರದೇಶದ ತೇವಾಂಶವನ್ನು ಸೆಳೆದುಕೊಂಡು ಸಾಗುತ್ತಿತ್ತು. ಈ ವೇಳೆ,ಮೇ 16ಕ್ಕೆ ಇಂಡೊನೇಷ್ಯಾದ ಜಾವಾದಲ್ಲಿ ಜ್ವಾಲಾಮುಖಿ ಸ್ಫೋಟವಾಯಿತು. 46 ಸಾವಿರ ಅಡಿ ಎತ್ತರಕ್ಕೆ ಚಿಮ್ಮಿದ ಇದು, ಸಾಮಾನ್ಯ ಜ್ವಾಲಾಮುಖಿಗಳಿಗಿಂತ ಮೂರು ಪಟ್ಟು ತೀವ್ರವಾಗಿತ್ತು. ಜ್ವಾಲಾಮುಖಿಯಿಂದ ಹೆಚ್ಚಿನ ಆವಿ ಬಂಗಾಳ ಕೊಲ್ಲಿಗೆ ಬಂದಿತು. ಈ ವೇಳೆ ಚಂಡಮಾರುತದ ದಿಕ್ಕು ಬದಲಾಗಿ ಒಡಿಶಾ, ಪಶ್ಚಿಮ ಬಂಗಾಳದ ಮೇಲೆ ಹೆಚ್ಚಿನ ಹಾನಿ ಉಂಟು ಮಾಡಿತು’ ಎಂದು ಪ್ರಕಾಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT