ಬುಧವಾರ, ಫೆಬ್ರವರಿ 26, 2020
19 °C

ಸನ್ಯಾಸ ಸ್ವೀಕರಿಸಿದ ಜೈನ ಸಮಾಜದ ಬಾಲಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜೈನ ಸಮಾಜದ ನಾಲ್ವರು ಬಾಲಕರು ಸೋಮವಾರ ಸನ್ಯಾಸ ಸ್ವೀಕರಿಸಿದರು. ಅವರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.

ನಗರದ ವರ್ತಕ  ಘೇಸುಲಾಲ್ ಮೆಹತಾ ಅವರ ಮೊಮ್ಮಗ ವರ್ಧಮಾನ್ ಮೆಹೆಂದರ್ ಮೆಹತಾ (16), ವರ್ಧಮಾನ್ ಅವರ ಸೋದರ ಮಾವನ ಮಕ್ಕಳಾದ ದಾವಣಗೆರೆ ಜಿಲ್ಲೆಯ ಚಳ್ಳಕೆರೆಯ ಬಾಗರೇಚಾ ಕುಟುಂಬದ ರಾಯನ್‌ ಬಾಗರೇಚಾ (10), ಪ್ರತೀಕ್ ಬಾಗರೇಚಾ (14), ಭಾವಿಕ್ ಬಾಗರೇಚಾ (16) ಸನ್ಯಾಸ ಸ್ವೀಕರಿಸಿದರು.

ವರ್ಧಮಾನ್ ನಗರದ ಎಸ್‌ಎಫ್ಎಸ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ಡಿ.14ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೈನ ಮುನಿಗಳಿಂದ ಇವರೆಲ್ಲರೂ ದೀಕ್ಷೆ ಸ್ವೀಕರಿಸಲಿದ್ದಾರೆ ಎಂದು ಕುಟುಂಬದವರು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು