ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದ್ರೋಳಿಯಲ್ಲಿ ನಾಳೆ ಬ್ರಹ್ಮಕಲಶಾಭಿಷೇಕ

Last Updated 15 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ನಾರಾಯಣ ಗುರುಗಳಿಂದ 1912ರಲ್ಲಿ ಸ್ಥಾಪನೆಗೊಂಡ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಇದೇ 17ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ.

1991ರಲ್ಲಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ, ಭಕ್ತರ ಸಹಕಾರದಲ್ಲಿ ಭವ್ಯವಾಗಿ ನವೀಕರಣಗೊಂಡ ಈ ಕ್ಷೇತ್ರವು ‘ಮಂಗಳೂರು ದಸರಾ’ ಮೂಲಕ ಪ್ರಸಿದ್ಧಿ ಪಡೆದಿದೆ.

ಶಿವಗಿರಿ ಮಠದ ವಿಷುದಾನಂದ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಹಾಗೂ ಸುಗುದಾನಂದ ತಂತ್ರಿ ಮತ್ತು ಕ್ಷೇತ್ರದ ಲಕ್ಷ್ಮಣ ಶಾಂತಿಯ ಪೌರೋಹಿತ್ಯದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ಇದೇ 10ರಂದು ಆರಂಭಗೊಂಡಿದ್ದು 17ರ ವರೆಗೆ ನಡೆಯಲಿದೆ. 17ರಂದು ಬೆಳಿಗ್ಗೆ 7.35ಕ್ಕೆ ರಾಜಗೋಪುರ ಶಿಖರ ಪ್ರತಿಷ್ಠೆ, ಧ್ವಜರೋಹಣ, ಮಧ್ಯಾಹ್ನ 12.15ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

**

ನೂತನ ಧ್ವಜಸ್ತಂಭ
ನಾರಾಯಣ ಗುರುಗಳ ಮಾರ್ಗದರ್ಶನದಲ್ಲೇ ಪ್ರತಿಷ್ಠಾಪಿಸಲಾಗಿದ್ದ ಧ್ವಜಸ್ತಂಭ ಶಿಥಿಲಾವಸ್ಥೆಯಲ್ಲಿ ಇದ್ದುದರಿಂದ ಅದನ್ನು ಈ ಬಾರಿ ಬದಲಿಸಲಾಗಿದೆ.

ಸುಳ್ಯ ತಾಲ್ಲೂಕಿನ ಉಬರಡ್ಕದಿಂದ ಕೊಡಿಮರವನ್ನು ತಂದು, ಕೆತ್ತನೆ ಮಾಡಿ, ತಾಮ್ರದ ಹೊದಿಕೆಯನ್ನು ಅಳವಡಿಸಲಾಗಿದೆ.ಈ ಧ್ವಜಸ್ತಂಭ ನೆಲಮಟ್ಟದಿಂದ 42 ಅಡಿ ಎತ್ತರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT