ಮೆದುಳು ನಿಷ್ಕ್ರಿಯ; ಅಂಗಾಂಗ ದಾನ

7
ಆಘಾತದಿಂದ ತಂದೆಯೂ ಸಾವು; ಆದರೂ ಮಾನವೀಯತೆ ಮೆರೆದ ಕುಟುಂಬ

ಮೆದುಳು ನಿಷ್ಕ್ರಿಯ; ಅಂಗಾಂಗ ದಾನ

Published:
Updated:
Deccan Herald

ಶಿವಮೊಗ್ಗ: ಗದ್ದೆಯಲ್ಲಿ ಕೆಲಸ ಮಾಡುವಾಗ ಮೂರ್ಛೆ ರೋಗಕ್ಕೆ ತುತ್ತಾಗಿ ಮಿದುಳು ನಿಷ್ಕ್ರಿಯವಾಗಿದ್ದ ಭದ್ರಾವತಿ ತಾಲ್ಲೂಕು ಜೇಡಿಕಟ್ಟೆಯ ಹರೀಶ್‌ (32) ಎಂಬುವವರ ಅಂಗಾಂಗಗಳನ್ನು ಅವರ ಕುಟುಂಬ ಶುಕ್ರವಾರ ದಾನ ಮಾಡಿದ್ದಾರೆ.

ಅಂಗಾಂಗಗಳನ್ನು ಬೆಂಗಳೂರಿನ ಆಸ್ಪತ್ರೆಗೆ ತುರ್ತು ಸಾಗಿಸಲು ಜಿಲ್ಲಾ ಪೊಲೀಸರು ಸಂಚಾರ ದಟ್ಟಣೆ ಮುಕ್ತ ಅವಕಾಶ ಕಲ್ಪಿಸಿದ್ದರು.

ಮೂರ್ಛೆ ಹೋಗಿದ್ದ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಬದುಕುವ ಸಾಧ್ಯತೆ ಇಲ್ಲ ಎಂದು ಖಚಿತಪಡಿಸಿ, ಅಂಗಾಂಗ ದಾನ ಮಾಡುವಂತೆ ಸಲಹೆ ನೀಡಿದ್ದರು. ಅದರಂತೆ ಕುಟುಂಬ ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾನ ಮಾಡಲು ಒಪ್ಪಿಗೆ ನೀಡಿತ್ತು. ಶುಕ್ರವಾರ ಬೆಳಿಗ್ಗೆ 6.30ಕ್ಕೆ ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಯಿತು.

ಮಗನ ಸ್ಥಿತಿಗೆ ಕನಲಿದ ತಂದೆಯ ಸಾವು:  ಆಸ್ಪತ್ರೆ ಸೇರಿದ್ದ ಮಗ ಮತ್ತೆ ಬದುಕುವುದಿಲ್ಲ ಎಂಬ ವಿಷಯ ತಿಳಿದ ತಂದೆ ಬಾಲಕೃಷ್ಣ (59) ಅವರು ಅಧಿಕ ರಕ್ತದ ಒತ್ತಡಕ್ಕೆ ಒಳಗಾಗಿ ಶುಕ್ರವಾರ ಬೆಳಿಗ್ಗೆ ಮೃತರಾದರು. ಇಂತಹ ಸ್ಥಿತಿಯಲ್ಲೂ ಕುಟುಂಬ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆಯಿತು.

ಹರೀಶ್ ಪಾರ್ಥಿವ ಶರೀರ ತಂದ ನಂತರ ಒಟ್ಟಿಗೆ ಅಂತ್ಯ ಸಂಸ್ಕಾರ ಗ್ರಾಮದಲ್ಲಿ ನೆರವೇರಿಸಲಾಯಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !