ವಿಷ ಕುಡಿದಂತೆ ನಟಿಸಿ ಪ್ರಿಯಕರನ ಜತೆ ವಧು ಪರಾರಿ

ಮಂಗಳವಾರ, ಜೂನ್ 25, 2019
25 °C

ವಿಷ ಕುಡಿದಂತೆ ನಟಿಸಿ ಪ್ರಿಯಕರನ ಜತೆ ವಧು ಪರಾರಿ

Published:
Updated:

ಶಿರಾ: ವಿವಾಹದ ಹಿಂದಿನ ದಿನ ಸಿನಿಮೀಯ ರೀತಿಯಲ್ಲಿ ನಾಟಕವಾಡಿದ ವಧು ಪ್ರಿಯಕರನ ಜೊತೆ ಹೋಗಿರುವ ಪ್ರಸಂಗ ತಾಲ್ಲೂಕಿನ ಮೆಳೇಕೋಟೆ ಗ್ರಾಮದಲ್ಲಿ ನಡೆದಿದೆ.

ಮೆಳೇಕೋಟೆಯ ಯುವತಿಯ ಜೊತೆ ದೊಡ್ಡಗೂಳ ಗ್ರಾಮದ ಮಂಜುನಾಥ್ ವಿವಾಹ ನಿಶ್ಚಯವಾಗಿತ್ತು. ಶನಿವಾರ ಪ್ರಥಮ ಶಾಸ್ತ್ರ ಹಾಗೂ ಆರತಕ್ಷತೆ ನಡೆದಿತ್ತು. ಭಾನುವಾರ ಬೆಳಿಗ್ಗೆ ಮುಹೂರ್ತಕ್ಕೆ ಎಲ್ಲ ರೀತಿಯ ತಯಾರಿ ಜರುಗಿತ್ತು.

ಶನಿವಾರ ರಾತ್ರಿ ವಧು ವಿಷ ಸೇವಿಸುವ ನಾಟಕವಾಡಿದ್ದಾಳೆ. ವಿಷವನ್ನು ಮೈ ಮೇಲೆ ಚೆಲ್ಲಿಕೊಂಡಿದ್ದಾಳೆ. ಪೋಷಕರು ವಧುವನ್ನು ತಾವರೆಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಗ ವಧು ಆಸ್ಪತ್ರೆಯಿಂದ ತನ್ನ ಪ್ರಿಯಕರನಾದ ಅತ್ತೆಯ ಮಗ ಚೇತನ್ ಎಂಬುವವರ ಜೊತೆ ಪರಾರಿಯಾಗಿದ್ದಾಳೆ. ಈ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಯುವತಿಗೆ ಈ ಮದುವೆ ಇಷ್ಟ ಇರಲಿಲ್ಲ. ಪೋಷಕರು ಬಲವಂತವಾಗಿ ಒಪ್ಪಿಸಿದ್ದರು ಎನ್ನಲಾಗಿದೆ.

‘ವಧುವಿನ ಸಂಬಂಧಿಕರು ಠಾಣೆಗೆ ಬಂದು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಆದರೆ ದೂರು ನೀಡಿಲ್ಲ’ ಎಂದು ತಾವರೆಕೆರೆ ಪೊಲೀಸರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !