ಗುರುವಾರ , ಆಗಸ್ಟ್ 22, 2019
25 °C

ಬ್ರಿಗೇಡ್ ಸಮೂಹದ ಆಸ್ತಿ ಮಾಹಿತಿಗಳ ಮೇಳ

Published:
Updated:

ಬೆಂಗಳೂರು: ಬ್ರಿಗೇಡ್ ಗ್ರೂಪ್‌ನ 12ನೇ ವಾರ್ಷಿಕ ಆಸ್ತಿ ಪ್ರದರ್ಶನ ಹಾಗೂ ಮಾಹಿತಿ ಮೇಳ ನಗರದ ಬ್ರಿಗೇಡ್‌ ಗೇಟ್‌ವೇನಲ್ಲಿರುವ ಶೆರಟಾನ್ ಗ್ರಾಂಡ್ ಹೋಟೆಲ್‌ನಲ್ಲಿ ಶುಕ್ರವಾರ ಆರಂಭವಾಯಿತು.

ಆ.4ರವರೆಗೆ ಪ್ರದರ್ಶನ ನಡೆ ಯಲಿದ್ದು, ದಕ್ಷಿಣ ಭಾರತದ ವಿವಿಧ ನಗರಗಳಲ್ಲಿ ಬ್ರಿಗೇಡ್ ಗ್ರೂಪ್‌ ಕೈಗೊಂಡಿರುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ.

‘ಈ ವರ್ಷದ ವಾಣಿಜ್ಯ ಮತ್ತು ವಸತಿ ಕಟ್ಟಡಗಳ ನಿರ್ಮಾಣದ ಯೋಜನೆಗಳು ವಿವಿಧ ಹಂತಗಳಲ್ಲಿ ಇವೆ. ಯಾವುದು ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಸಾರ್ವಜನಿಕರಿಗೆ ಈ ಪ್ರದರ್ಶನದ ಮೂಲಕ ಅವಕಾಶ ಕಲ್ಪಿಸಲಾಗಿದೆ’ ಎಂದು ಬ್ರಿಗೇಡ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಪವಿತ್ರಾ ಶಂಕರ್ ತಿಳಿಸಿದರು.

‘ವಸತಿ ಮತ್ತು ವಾಣಿಜ್ಯ ಬಳಕೆಗೆ ಅಗತ್ಯ ಇರುವ ಕಟ್ಟಡಗಳ ಬಗ್ಗೆ ಗ್ರಾಹಕರು ಒಂದೇ ಸೂರಿನಡಿ ಮಾಹಿತಿ ಪಡೆದುಕೊಳ್ಳಬಹುದು.

Post Comments (+)