ಎಸ್‌ಐಟಿ ತನಿಖೆ: ನಿಲುವು ಬದಲಾವಣೆಗೆ ಒತ್ತಡ ಹೇರುವ ಸಂಬಂಧ ಬಿಎಸ್‌ವೈ ಸಭೆ

7

ಎಸ್‌ಐಟಿ ತನಿಖೆ: ನಿಲುವು ಬದಲಾವಣೆಗೆ ಒತ್ತಡ ಹೇರುವ ಸಂಬಂಧ ಬಿಎಸ್‌ವೈ ಸಭೆ

Published:
Updated:

ಬೆಂಗಳೂರು: ಸದನದಲ್ಲಿ ನಡೆಯಲಿರುವ ಕಲಾಪದ ವೇಳೆ ಆಡಿಯೊ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸದಂತೆ ನೋಡಿಕೊಳ್ಳುವ ಕುರಿತು ಚರ್ಚೆ ನಡೆಸಲು ಡಾಲರ್ಸ್‌ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಭೆ ನಡೆಸಿದರು.

ಎಸ್‌ಐಟಿ ತನಿಖೆ ಬದಲು ಸದನ ಸಮಿತಿ ಇಲ್ಲವೇ ನ್ಯಾಯಾಂಗ ತನಿಖೆಗೆ ಒತ್ತಾಯಿಸುವ ಸಂಬಂಧ ಆಪ್ತರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.

‌ಸಭೆಗೂ ಮುನ್ನ ಬಿಎಸ್‌ವೈ ಮನೆ ಎದುರು ಜಮಾಯಿಸಿದ್ದ ಬಿಜೆಪಿ ನಾಯಕರು, ಬಿಜೆಪಿ ಹಾಗೂ ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಿಯೊ ತಂತ್ರ ಎಣೆದಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಹಾಗೂ ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು.

 

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !