ಭಾನುವಾರ, ಆಗಸ್ಟ್ 25, 2019
21 °C

ನೆರೆ ಪರಿಹಾರ: ಪ್ರಧಾನಿ ಮೋದಿಯೊಂದಿಗೆ ಬಿಎಸ್‌ವೈ ಚರ್ಚೆ, ಅನುದಾನ ಬಿಡುಗಡೆಗೆ ಮನವಿ

Published:
Updated:

ನವದೆಹಲಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ಅಧ್ಯಯನ ತಂಡ ಕಳುಹಿಸುವಂತೆ ಹಾಗೂ ತುರ್ತು ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. 

ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ಪ್ರಧಾನಿ ಅವರೊಂದಿಗೆ ನೆರೆ ಹಾವಳಿ, ಸಂತ್ರಸ್ತರ ಬಗ್ಗೆ 40 ನಿಮಿಷಗಳ ಕಾಲ ಚರ್ಚೆ ನಡೆಸಿದ್ದೇವೆ. ಜತೆಗೆ, ತುರ್ತು ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ತಕ್ಷಣವೇ ಅಧ್ಯಯನ ತಂಡ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು. 

ಇದೇ ವೇಳೆ ಶಾಸಕರಾದ ಜಗದೀಶ್ ಶೆಟ್ಟರ್, ಆರ್. ಅಶೋಕ್, ಗೋವಿಂದ ಕಾರಜೋಳ ಉಪಸ್ಥಿತರಿದ್ದರು. 

ಇನ್ನಷ್ಟು... 

ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ₹5 ಲಕ್ಷ ದೇಣಿಗೆ ನೀಡಿದ ಪುನೀತ್

‘ನೆರೆ– ಬರ ಎದುರಿಸಲು ಸರ್ಕಾರ ಸನ್ನದ್ಧ’ 

ನೆರೆ ಹಾವಳಿಗೆ ಕೇಂದ್ರದ ಸ್ಪಂದನೆ ಇಲ್ಲ: ಖರ್ಗೆ ಟೀಕೆ 

ಸಿಗದ ಕೇಂದ್ರ ಪರಿಹಾರ: ದೇವೇಗೌಡ ಗರಂ

 

Post Comments (+)