ಬುಧವಾರ, ನವೆಂಬರ್ 13, 2019
28 °C

ನನ್ನ ತಂದೆ ಕನಸಲ್ಲಿ ಕಾಡುತ್ತಿದ್ದಾರೆ: ನಾರಾಯಣಗೌಡಗೆ ಬಿಎಸ್‌ವೈ ಹೇಳಿದ ಕನಸಿನ ಕತೆ

Published:
Updated:

ಕೆ.ಆರ್‌ ಪೇಟೆ (ಮಂಡ್ಯ):  ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ತಾವು ಕಂಡ ಕನಸೊಂದನ್ನು ತಮ್ಮೊಂದಿಗೆ ಹಂಚಿಕೊಂಡಿರುವುದಾಗಿ ಅನರ್ಹ ಶಾಸಕ ನಾರಾಯಣಗೌಡ  ಬಹಿರಂಗವಾಗಿ ತಿಳಿಸಿದ್ದಾರೆ.  

‘ನನ್ನ ತಂದೆ ಬೂಕನಕೆರೆಯಲ್ಲಿ ವೀರಭದ್ರಸ್ವಾಮಿಯ ಪೂಜೆ ಮಾಡಿಕೊಂಡು ನನ್ನನ್ನು ಬೆಳೆಸಿದ್ದಾರೆ. ಆದರೆ ಕೆ.ಆರ್‌.ಪೇಟೆ ತಾಲ್ಲೂಕು ಅಭಿವೃದ್ಧಿಯಾಗಿಲ್ಲ ಎಂದು ಅವರು ನನ್ನ ಸ್ವಪ್ನದಲ್ಲಿ ಬಂದು ಕಾಡುತ್ತಿದ್ದಾರೆ. ನೀನು ನನ್ನ ಜೊತೆ ಬಂದರೆ ಜೊತೆಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡಬಹುದು ಎಂದು ಯಡಿಯೂರಪ್ಪ ಹೇಳಿದ್ದರು’ ಎಂದು ನಾರಾಯಣಗೌಡ ಮುಖ್ಯಮಂತ್ರಿಗಳ ಸ್ವಪ್ನದ ಕತೆ ಬಿಚ್ಚಿಟ್ಟರು.

ಪ್ರತಿಕ್ರಿಯಿಸಿ (+)