ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕೋದ್ಯಮದ ಎಲ್ಲರಿಗೂ ಪತ್ರಕರ್ತರ ಸೌಲಭ್ಯ ವಿಸ್ತರಣೆ: ಚಿಂತನೆ

Last Updated 6 ಮಾರ್ಚ್ 2020, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಪತ್ರಕರ್ತರಿಗೆನೀಡುವ ಸಹಾಯ ಸೌಲಭ್ಯಗಳನ್ನು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ಎಲ್ಲರಿಗೂ ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದುಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘25 ವರ್ಷ ಸೇವೆ ಸಲ್ಲಿಸಿರುವ, 60 ವರ್ಷ ವಯೋಮಾನ ಮೀರಿದ ಪತ್ರಕರ್ತರಿಗೆ ರಾಜ್ಯ ಸರ್ಕಾರ ₹ 10 ಸಾವಿರ ಮಾಸಾಶನ ನೀಡುತ್ತಿದೆ. ಅಲ್ಲದೆ, ಈ ಪತ್ರಕರ್ತರು ಮೃತಪಟ್ಟರೆ ಅವರ ಅವಲಂಬಿತ ಪತ್ನಿ ಅಥವಾ ಪತಿಗೆ ₹ 3 ಸಾವಿರ ಕುಟುಂಬ ಮಾಸಾಶನ ನೀಡಲಾಗುತ್ತಿದೆ’ ಎಂದರು.

‘ಪ್ರಸ್ತುತ, ಸಂಕಷ್ಟದಲ್ಲಿರುವ 230 ಪತ್ರಕರ್ತರು ಮಾಸಾಶನ ಪಡೆಯುತ್ತಿದ್ದಾರೆ. 16 ಮಂದಿ ಕುಟುಂಬ ಮಾಸಾಶನ ಪಡೆಯುತ್ತಿದ್ದಾರೆ. ಕುಟುಂಬದ ವಾರ್ಷಿಕ ಆದಾಯ ₹ 1.20 ಲಕ್ಷ ಒಳಗಿರುವ ಮತ್ತು ₹ 2 ಲಕ್ಷಕ್ಕಿಂತ ಕಡಿಮೆ ಉಪದಾನ (ಫೈನಲ್‌ ಸೆಟ್ಲ್‌ಮೆಂಟ್‌) ಪಡೆದಿರುವ ಪತ್ರಕರ್ತರು ಮಾಸಾಶನ ಪಡೆಯಲು ಅರ್ಹರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT