ಭಾನುವಾರ, ಸೆಪ್ಟೆಂಬರ್ 15, 2019
27 °C

ಅಮಿತ್‌ ಶಾರಿಂದ ಕೆಲವೇ ಗಂಟೆಗಳಲ್ಲಿ ಸಚಿವರ ಪಟ್ಟಿ ಅಂತಿಮ: ಬಿಎಸ್‌ವೈ 

Published:
Updated:

ಬೆಂಗಳೂರು: ಇನ್ನು ಕೆಲವೇ ಗಂಟೆಗಳಲ್ಲಿ ಅಮಿತ್‌ ಶಾ ಅವರಿಂದ ಸಚಿವರ ಅಂತಿಮ ಪಟ್ಟಿ ಸಿಗಲಿದೆ. ನಾಳೆ (ಮಂಗಳವಾರ) ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ತಿಳಿಸಿದರು. 

ಬೆಂಗಳೂರಿನ ಡಾಲರ್ಸ್‌ ಕಾಲೋನಿಯ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ ಇನ್ನು ಮೂರ್ನಾಲ್ಕು ಗಂಟೆಗಳಲ್ಲಿ ಪಕ್ಷದ ಅಧ್ಯಕ್ಷ  ಅಮಿತ್‌ ಶಾ ಅವರಿಂದ ಸಚಿವರ ಅಂತಿಮ ಪಟ್ಟಿ ಲಭ್ಯವಾಗಲಿದೆ. ಸಚಿವರಾಗಿ ಆಯ್ಕೆಯಾಗುವವರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು. 

ಸರ್ಕಾರ ರಚನೆ ಮಾಡಿ ಹತ್ತಿರತ್ತಿರ ತಿಂಗಳಾಗುತ್ತಿದ್ದರೂ ಮಂತ್ರಿ ಮಂಡಲ ರಚನೆಯಾಗದ್ದಕ್ಕೆ ವಿಪಕ್ಷಗಳಿಂದ ಬಿಜೆಪಿ ತೀವ್ರ ಟೀಕೆಗಳನ್ನು ಎದುರಿಸಿತ್ತು. ಬಿಎಸ್‌ ಯಡಿಯೂರಪ್ಪ ಅವರು ಏಕವ್ಯಕ್ತಿ, ಏಕಚಕ್ರಾದಿಪತ್ಯದ ಸರ್ಕಾರ ನಡೆಸುತ್ತಿದ್ದಾರೆ ಎಂದೆಲ್ಲ ಗೇಲಿ ಮಾಡಲಾಗಿತ್ತು. 

Post Comments (+)