‌ಅರ್ಥಶಾಸ್ತ್ರಜ್ಞ ಪ್ರೊ‌.ಬಿ.ಶೇಷಾದ್ರಿ ನಿಧನ

7

‌ಅರ್ಥಶಾಸ್ತ್ರಜ್ಞ ಪ್ರೊ‌.ಬಿ.ಶೇಷಾದ್ರಿ ನಿಧನ

Published:
Updated:

ಬಳ್ಳಾರಿ: ಖ್ಯಾತ ‌ಅರ್ಥಶಾಸ್ತ್ರಜ್ಞ ಪ್ರೊ‌.ಬಿ.ಶೇಷಾದ್ರಿ(81) ಅವರು ಗುರುವಾರ ರಾತ್ರಿ ನಗರದ ‌ತಮ್ಮ ಮನೆಯಲ್ಲಿ‌ ನಿಧನರಾದರು.

ಅವರಿಗೆ ಪತ್ನಿ‌ ಪದ್ಮಾವತಿ, ಮೂವರು‌ ಪುತ್ರರು ಹಾಗೂ ಒಬ್ಬ ‌ಪುತ್ರಿ ಇದ್ದಾರೆ. ಶೇಷಾದ್ರಿ ಅವರು ಹಲವು‌ ವರ್ಷದಿಂದ ಕ್ಯಾನ್ಸರ್‌ನಿಂದ‌ ಬಳಲುತ್ತಿದ್ದರು.

ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಲಿದೆ ಎಂದು ಕಟುಂಬದ ಮೂಲಗಳು ತಿಲಿಸಿವೆ.

ರಾಜ್ಯದಲ್ಲಿ ಹೈದರಾಬಾದ್ ‌ಕರ್ನಾಟಕ‌ ಪ್ರದೇಶಾಭಿವೃದ್ಧಿ ಮಂಡಳಿ‌ ಸ್ಥಾಪನೆಯಾಗಲು ‌ಇವರ‌ ಪ್ರಯತ್ನವೂ ಕಾರಣ. ಪ್ರಾದೇಶಿಕ ಅಸಮತೋಲನ‌ ನಿವಾರಣೆ ಕುರಿತು‌ ತಮ್ಮ ದನಿಯನ್ನು‌ ಕೊನೆಯ ಉಸಿರಿನವರೆಗೂ ಅವರು ಕಾಯ್ದುಕೊಂಡಿದ್ದರು.

ಇತ್ತೀಚೆಗಷ್ಟೇ ಅವರ ‌ವಿದ್ಯಾರ್ಥಿಗಳು ಅವರಿಗೆ ಅಭಿನಂದನೆ‌ ಸಲ್ಲಿಸಿ, ಎರಡು ಕೃತಿಗಳನ್ನು ‌ಲೋಕಾರ್ಪಣೆ‌ ಮಾಡಿದ್ದರು.

ಹಿಂದಿನ ವರ್ಷ ಶೇಷಾದ್ರಿ ‌ಅವರಿಗೆ‌‌ ಎಂ‌ಎಂ ‌ಕಲಬುರ್ಗಿ‌ ಸಂಶೋಧನಾ ‌ಪ್ರಶಸ್ತಿ‌ ದೊರಕಿತ್ತು. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !