ಭಾನುವಾರ, ಮಾರ್ಚ್ 7, 2021
31 °C
ಶನಿವಾರ ಸಂಜೆ ಹೊಸಪೇಟೆಗೆ ಬರಲಿದೆ ಪಾರ್ಥೀವ ಶರೀರ

ಹೃದಯಾಘಾತದಿಂದ ಬಿ.ಎಸ್‌.ಎಫ್‌. ಯೋಧ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಗಡಿ ಭದ್ರತಾ ಪಡೆಯಲ್ಲಿ (ಬಿ.ಎಸ್‌.ಎಫ್‌.) ಯೋಧರಾಗಿ ಕೆಲಸ ನಿರ್ವಹಿಸುತ್ತಿದ್ದ ಇಲ್ಲಿನ ಜಂಬುನಾಥಹಳ್ಳಿ ರಸ್ತೆಯ ನಿವಾಸಿ ವರದ ಲೇಪಾಕ್ಷಿ (43) ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ.

ರಾಜಸ್ತಾನದ ಬಿಕನೇರ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ಸೇನಾ ಮೂಲಗಳು ತಿಳಿಸಿವೆ. ಮೃತರಿಗೆ ಪತ್ನಿ, ಗಂಡು, ಹೆಣ್ಣು ಮಗಳಿದ್ದಾರೆ. ಶನಿವಾರ (ಆ.3) ಸಂಜೆ ಪಾರ್ಥೀವ ಶರೀರ ನಗರಕ್ಕೆ ಬರಲಿದೆ. ಲೇಪಾಕ್ಷಿ ಅವರು 17 ವರ್ಷಗಳಿಂದ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಸಂಸದರ ಕಂಬನಿ:

ಯೋಧ ವರದ ಲೇಪಾಕ್ಷಿ ಅವರ ಅಕಾಲಿಕ ನಿಧನಕ್ಕೆ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪನವರು ಕಂಬನಿ ಮಿಡಿದಿದ್ದಾರೆ.
‘ನವದೆಹಲಿಯ ಸಂಸತ್‌ ಕಲಾಪದಲ್ಲಿ ಭಾಗವಹಿಸಿರುವ ಕಾರಣ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗುತ್ತಿಲ್ಲ. ಇಷ್ಟರಲ್ಲೇ ಕ್ಷೇತ್ರಕ್ಕೆ ಬಂದು ಅವರ ಮನೆಗೆ ಭೇಟಿ ನೀಡುವೆ’ ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.