‘ಹಸಿರು ನಿಶಾನೆ ಸಿಕ್ಕರೆ ಸಂಪುಟಕ್ಕೆ’

7

‘ಹಸಿರು ನಿಶಾನೆ ಸಿಕ್ಕರೆ ಸಂಪುಟಕ್ಕೆ’

Published:
Updated:
Deccan Herald

ಬೆಂಗಳೂರು:‘ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನ್ನನ್ನು ಪರಿಗಣಿಸಿದರೆ ಸಚಿವ ಸಂಪುಟ ಸೇರಲು ಸಿದ್ಧ’ ಎಂದು ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ಹೇಳಿದರು.

ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ಆದಾಗ ಜೆಡಿಎಸ್‌ ಕೋಟದಲ್ಲಿ ಮಹೇಶ್‌ ಸಚಿವರಾದರು. ಪಕ್ಷದ ನಾಯಕಿ ಮಾಯಾವತಿ ಸೂಚನೆ ಮೇರೆಗೆ ಬಳಿಕ ರಾಜೀನಾಮೆ ನೀಡಿದರು. ಇದೀಗ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಬಿಎಸ್‌ಪಿ ಬೆಂಬಲ ವ್ಯಕ್ತಪಡಿಸಿರುವ ಬೆನ್ನಲ್ಲೇ ಮಹೇಶ್‌ ಸಂಪುಟ ಸೇರುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಚಿವನಾಗಿದ್ದ ಸಂದರ್ಭದಲ್ಲಿ ಪಕ್ಷದ ಸೂಚನೆಯಂತೆ ನಡೆದುಕೊಂಡಿದ್ದೇನೆ. ಈಗ ಮಾಯಾವತಿ ಅವರು ಸಂಪುಟ ಸೇರಲು ಹಸಿರು ನಿಶಾನೆ ನೀಡಿದರೆ, ಸಂಪುಟ ಸೇರುತ್ತೇನೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !