‘ಸರ್ಕಾರ ಉರುಳಿಸುವ ಯತ್ನ ಇಲ್ಲ’

7

‘ಸರ್ಕಾರ ಉರುಳಿಸುವ ಯತ್ನ ಇಲ್ಲ’

Published:
Updated:
Deccan Herald

ಬೆಂಗಳೂರು: ‘ರಾಜ್ಯದ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನ ಮಾಡುತ್ತಿಲ್ಲ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಸರ್ಕಾರ ಬೀಳಿಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ’ ಎಂದರು.

‘ತುರ್ತು ಸಭೆ ಇದ್ದ ಕಾರಣ ದೆಹಲಿಗೆ ಮಂಗಳವಾರ ಹೋಗಿದ್ದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಕುರಿತು ಚರ್ಚಿಸಿದ್ದೇನೆ. ವಿರೋಧ ಪಕ್ಷದಲ್ಲೇ ಇದ್ದು ಮೈತ್ರಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ’ ಎಂದರು.

‘ರಾಜ್ಯದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಕುರಿತು ಕೇಂದ್ರ ಸಚಿವರ ಜತೆಗೆ ಚರ್ಚಿಸಿದ್ದೇನೆ’ ಎಂದರು.

ಬೆಳೆ ವಿಮೆ ವ್ಯಾಪ್ತಿಗೆ ಟಿಬೆಟನ್‌ ರೈತರು

ಮುಂಡಗೋಡ (ಉತ್ತರ ಕನ್ನಡ): ನಿರಾಶ್ರಿತ ಟಿಬೆಟನ್‌ ರೈತರು ಸಹ, ಇನ್ನು ಮುಂದೆ ಬೆಳೆ ವಿಮಾ ಸೌಲಭ್ಯವನ್ನು ಪಡೆಯಲು ಅರ್ಹರಾಗಿದ್ದಾರೆ. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ಟಿಬೆಟನ್‌ ರೈತರನ್ನು ಸೇರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸಕ್ತ ವರ್ಷದಿಂದ ಈ ರೈತರು ಬೆಳೆ ವಿಮೆ ಪಡೆಯಲಿದ್ದಾರೆ. ಇದಲ್ಲದೇ ಬೆಳೆ ಸಾಲ, ಕೃಷಿ ಅನುಷ್ಠಾನ ಉಪಕರಣಗಳು, ಕೃಷಿ ಯಂತ್ರಗಳು, ಬೀಜ, ರಸಗೊಬ್ಬರ ಸಹಾಯಧನ ಸೌಲಭ್ಯವನ್ನು ನಿರಾಶ್ರಿತ ಟಿಬೆಟನ್ನರಿಗೆ ಕೆಲ ಷರತ್ತುಗಳೊಂದಿಗೆ ವಿಸ್ತರಿಸಲು ಆದೇಶದಲ್ಲಿ ತಿಳಿಸಲಾಗಿದೆ.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅವರಿಗೆ ಒಟ್ಟು 4,045 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ. ಇದರಲ್ಲಿ ಶೇ 50ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಅವರು ಸಾಗುವಳಿ ಮಾಡುತ್ತಿದ್ದಾರೆ.

‘ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಬಗ್ಗೆ ಟಿಬೆಟನ್‌ ರೈತರಿಗೆ ಬುಧವಾರ ಮಾಹಿತಿ ನೀಡಿದ್ದೇನೆ. ಮೆಕ್ಕೆಜೋಳಕ್ಕೆ ವಿಮಾ ಕಂತು ತುಂಬುವ ಅವಧಿ ಮುಗಿದಿದ್ದು, ಭತ್ತಕ್ಕೆ ವಿಮಾ ಸೌಲಭ್ಯ ಪಡೆಯಬಹುದು. ಮುಂದಿನ ವರ್ಷದಿಂದ ಎರಡೂ ಬೆಳೆಗಳು ವಿಮೆ ವ್ಯಾಪ್ತಿಗೆ ಬರುತ್ತವೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಮಹಾಂತೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !