ಮೈತ್ರಿ ಸರ್ಕಾರದ ವಿರುದ್ಧ ‘ಕಮಲ’ ಕಹಳೆ

7

ಮೈತ್ರಿ ಸರ್ಕಾರದ ವಿರುದ್ಧ ‘ಕಮಲ’ ಕಹಳೆ

Published:
Updated:

ಬೆಂಗಳೂರು: ಮೈತ್ರಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಬಿಜೆಪಿ, ಆಡಳಿತ ವೈಫಲ್ಯ ಖಂಡಿಸಿ ಸೆಪ್ಟೆಂಬರ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲು ನಿರ್ಧರಿಸಿದೆ.

ನಗರದಲ್ಲಿ ಭಾನುವಾರ ನಡೆದ ‘ಬೆಂಗಳೂರು ಮಹಾನಗರ ಮಟ್ಟದ ಶಕ್ತಿ ಕೇಂದ್ರದ ಪ್ರಮುಖರ ಸಭೆ’ಯನ್ನು ಉದ್ಘಾಟಿಸಿದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ‘ರಾಜ್ಯದಲ್ಲಿ ಅನೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಹತ್ತಾರು ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ’ ಎಂದರು.

‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಬಡಿದಾಡಿಕೊಂಡು ಶೀಘ್ರದಲ್ಲೇ ಈ ಸರ್ಕಾರ ಪತನವಾಗಲಿದೆ. ನಾವೆಲ್ಲ ಒಗ್ಗಟ್ಟಾಗಿ, ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇನ್ನಷ್ಟು ಬೇಗ ಮನೆಗೆ ಹೋಗಲಿದ್ದಾರೆ’ ಎಂದರು.

‘ಪಕ್ಷದ ಮಹಿಳಾ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹಿಂದುಳಿದ ಮೋರ್ಚಾಗಳನ್ನು ಬಲಪಡಿಸುವ ಕಡೆಗೆ ವಿಶೇಷ ಗಮನ ನೀಡಬೇಕು. ಪ್ರತಿ ಕಾರ್ಯಕರ್ತರು ಕನಿಷ್ಠ 10 ಮಂದಿಯನ್ನು ಪಕ್ಷಕ್ಕೆ ಸೇರಿಸಬೇಕು. ಹಿಂದುಳಿದ ಜಾತಿಗಳ ಹಾಗೂ ಪರಿಶಿಷ್ಟ ಮುಖಂಡರ ಮನೆ ಬಾಗಿಲಿಗೇ ಹೋಗಿ ಪಕ್ಷಕ್ಕೆ ಕರೆತರಬೇಕು. 15,000–20,000 ಜನರನ್ನು ಸೇರಿಸಿ ಪ್ರತಿಭಟನಾ ಧರಣಿಗಳನ್ನು ನಡೆಸಬೇಕು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !