ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರಿಗೆ ನ್ಯಾಯ ಸಿಕ್ಕಿದೆ: ಬಿಎಸ್‌ವೈ

Last Updated 13 ನವೆಂಬರ್ 2019, 22:05 IST
ಅಕ್ಷರ ಗಾತ್ರ

ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಹಾಗೆಯೇ ಆಗಿದೆ, ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ತೀರ್ಪು ಹೊರಬಿದ್ದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದರಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸ್ಪೀಕರ್‌ ಕೆ.ಆರ್.ರಮೇಶ್‌ ಕುಮಾರ್‌ ಅವರಿಗೆ ಹಿನ್ನಡೆಯಾಗಿದೆ. ಇವರಿಬ್ಬರೂ ಸೇರಿ ಷಡ್ಯಂತ್ರ ನಡೆಸಿದ್ದರು ಎಂದರು.

‘ಉಪಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲಲು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಸಚಿವರು ಮತ್ತು ಪಕ್ಷದ ನಾಯಕರನ್ನು ಉಸ್ತುವಾರಿಗಳನ್ನಾಗಿ ತಕ್ಷಣವೇ ನೇಮಕ ಮಾಡಲಾಗುವುದು. ಈಗಾಗಲೇ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಯಾರಿಗೂ ಅಸಮಾಧಾನಕ್ಕೆ ಅವಕಾಶ ಇಲ್ಲದಂತೆ ಚುನಾವಣೆ ಎದುರಿಸುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು.

**
ಪಕ್ಷಾಂತರಿಗಳಿಗೆ ಪಾಠ: ಸಿದ್ದರಾಮಯ್ಯ
ಬೆಂಗಳೂರು:
‘ಪಕ್ಷ, ಜನರಿಗೆ ದ್ರೋಹ ಮಾಡಿ ಶಾಸಕರು ಪಕ್ಷಾಂತರ ಮಾಡಿದ್ದನ್ನು ಸುಪ್ರೀಂ ಕೋರ್ಟ್ ಸಹ ಒಪ್ಪಿಲ್ಲ. ಪಕ್ಷಾಂತರ ಮಾಡುವವರಿಗೆ ಇದೊಂದು ಪಾಠವಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

‘ವಿಪ್ ಉಲ್ಲಂಘಿಸಿ, ಪಕ್ಷಾಂತರಕ್ಕೆ ಮುಂದಾಗಿದ್ದ ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಆದೇಶವನ್ನು ಕೋರ್ಟ್ ಎತ್ತಿಹಿಡಿದಿದೆ. ಆದರೆ 15ನೇ ವಿಧಾನಸಭೆಯ ಅವಧಿ ಮುಗಿಯುವ 2023ರ ವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಆದೇಶವನ್ನು ಕೋರ್ಟ್ ಪರಿಷ್ಕರಿಸಿದೆ. ಈ ಆದೇಶವನ್ನೂ ಸ್ವಾಗತಿಸುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಕಾಂಗ್ರೆಸ್, ಜೆಡಿಎಸ್‌ನ 17 ಶಾಸಕರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು. ಇದರಲ್ಲಿ ಸ್ವಾರ್ಥ ಎಷ್ಟಿತ್ತು, ಪಕ್ಷಾಂತರದ ಉದ್ದೇಶ ಇರಲಿಲ್ಲವೆ?’ ಎಂಬುದು ಕೋರ್ಟ್ ತೀರ್ಪಿನಿಂದ ಸ್ಪಷ್ಟವಾಗುತ್ತದೆ ಎಂದರು.

‘ಪಕ್ಷಾಂತರ ನಿಷೇಧ ನಿಯಮಾವಳಿ ಪ್ರಕಾರ ಅನರ್ಹ ಶಾಸಕರು ಎಷ್ಟು ವರ್ಷಗಳ ಕಾಲ ಚುನಾವಣೆಗೆ ನಿಲ್ಲಬಾರದು ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಸಂಬಂಧಿಸಿದ ಕ್ಷೇತ್ರಕ್ಕೆ ಚುನಾವಣೆ ನಡೆಯುವವರೆಗೂ ಎಂದು ಅರ್ಥೈಸುವ ರೀತಿಯಲ್ಲಿ ವಿವರಣೆ ಇದೆ. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶ ನೀಡಿರಬಹುದು’ ಎಂದರು.

**
ಕಾಯ್ದೆ ರದ್ದುಗೊಳಿಸಿ: ಎಚ್‌ಡಿಕೆ
ಬೆಂಗಳೂರು:
ರಾಜ್ಯದಲ್ಲಿ ಸರ್ಕಾರ ಅಸ್ಥಿರಗೊಳಿಸಿದಅನರ್ಹ ಶಾಸಕರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪನ್ನು ಒಪ್ಪಿಕೊಳ್ಳಲೇಬೇಕಿದ್ದರೂ,ಪಕ್ಷಾಂತರ ನಿಷೇಧ ಕಾಯ್ದೆ ಅಗತ್ಯ ಇದೆಯೆ ಎಂಬ ಪ್ರಶ್ನೆ ಮೂಡುತ್ತದೆ. ಈ ಕಾನೂನನ್ನು ರದ್ದುಗೊಳಿಸುವುದೇ ಸೂಕ್ತ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಸ್ಪೀಕರ್ ನೀಡಿದ್ದ ಶಾಸಕರ ಅನರ್ಹತೆ ಆದೇಶವನ್ನು ಈ ತೀರ್ಪು ಎತ್ತಿ ಹಿಡಿದಿದೆ. ಶಾಸಕರು ಮೂರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಬಾರದು ಎಂಬುದನ್ನು ನ್ಯಾಯಾಲಯ ಸಡಿಲಗೊಳಿಸಿದೆ. ಈ ಕಾನೂನು, ನಾನು ಹೊಡೆದಂತೆ ಮಾಡುತ್ತೇನೆ, ನೀನು ಅತ್ತಂಗೆ ಮಾಡು ಎಂಬಂತಿದೆ’ ಎಂದರು.

*
ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರುವುದು ಅನರ್ಹ ಶಾಸಕರಿಗೆ ಸಾಕಷ್ಟು ನಿರಾಳತೆ ಕಲ್ಪಿಸಿದೆ.
-ಸಜನ್‌ ಪೂವಯ್ಯ, ಹಿರಿಯ ವಕೀಲರು

*
ಸಂವಿಧಾನದ ಹತ್ತನೇ ಶೆಡ್ಯೂಲ್‌ ಮತ್ತು ಜನಪ್ರತಿನಿಧಿ ಕಾಯ್ದೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸಲಾಗಿದೆ. ಈ ಲೋಪಗಳೇ ಅನರ್ಹ ಶಾಸಕರ ಪಾಲಿಗೆ ಅವಕಾಶದ ಬಾಗಿಲನ್ನು ತೆರೆದಿವೆ.
-ಕೆ.ಬಿ.ಕೆ‌. ಸ್ವಾಮಿ,ವಕೀಲರು

*
ತೀರ್ಪು ಇನ್ನಷ್ಟು ಕ್ರಿಯಾಶೀಲ ಆಗಬಹು ದಿತ್ತು. ಅನರ್ಹತೆ ಎತ್ತಿಹಿಡಿದಿರುವಂತೆಯೇ ಅವರನ್ನು ಉಳಿದ ಅವಧಿಗೆ ಸ್ಪರ್ಧಿಸದಂತೆ ಹೇರಿದ ನಿರ್ಬಂಧಕ್ಕೂ ಹಸಿರು ನಿಶಾನೆ ತೋರಿದ್ದರೆ ಜನಪ್ರತಿನಿಧಿಗಳಿಗೆ ಒಂದಷ್ಟು ಮೈ ಚಳಿ ಹುಟ್ಟುತ್ತಿತ್ತು.
-ಉದಯ ಹೊಳ್ಳ,ಹಿರಿಯ ವಕೀಲರು

*
ರಾಜೀನಾಮೆ ಕೊಟ್ಟಾಗ ಮತ್ತು ಅನರ್ಹತೆ ಪ್ರಕರಣ ಎರಡೂ ಇದ್ದಾಗ ಏನು ಮಾಡಬೇಕು ಎಂಬುದಕ್ಕೆ ಈಗ ಒಂದು ಮಿತಿಯಲ್ಲಿ ಸ್ಪಷ್ಟತೆ ಬಂದಿದೆ. ವಿಧಾನಸಭಾಧ್ಯಕ್ಷರ ಮೇಲೆ ಗಂಭೀರ ಕಾಮೆಂಟ್‌ ಮಾಡಿರುವುದು ಗಮನಾರ್ಹ.ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರುವುದು ಅನರ್ಹ ಶಾಸಕರಿಗೆ ಸಾಕಷ್ಟು ನಿರಾಳತೆ ಕಲ್ಪಿಸಿದೆ.
-ಸಜನ್‌ ಪೂವಯ್ಯ, ಹಿರಿಯ ವಕೀಲರು

*
ಸಂವಿಧಾನದ ಹತ್ತನೇ ಶೆಡ್ಯೂಲ್‌ ಮತ್ತು ಜನಪ್ರತಿನಿಧಿ ಕಾಯ್ದೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸಲಾಗಿದೆ. ಈ ಲೋಪಗಳೇ ಅನರ್ಹ ಶಾಸಕರ ಪಾಲಿಗೆ ಅವಕಾಶದ ಬಾಗಿಲನ್ನು ತೆರೆದಿವೆ.
-ಕೆ.ಬಿ.ಕೆ‌. ಸ್ವಾಮಿ,ವಕೀಲರು

*
ತೀರ್ಪು ಇನ್ನಷ್ಟು ಕ್ರಿಯಾಶೀಲ ಆಗಬಹು ದಿತ್ತು. ಅನರ್ಹತೆ ಎತ್ತಿಹಿಡಿದಿರುವಂತೆಯೇ ಅವರನ್ನು ಉಳಿದ ಅವಧಿಗೆ ಸ್ಪರ್ಧಿಸದಂತೆ ಹೇರಿದ ನಿರ್ಬಂಧಕ್ಕೂ ಹಸಿರು ನಿಶಾನೆ ತೋರಿದ್ದರೆ ಜನಪ್ರತಿನಿಧಿಗಳಿಗೆ ಒಂದಷ್ಟು ಮೈ ಚಳಿ ಹುಟ್ಟುತ್ತಿತ್ತು.
-ಉದಯ ಹೊಳ್ಳ,ಹಿರಿಯ ವಕೀಲರು

*
ರಾಜೀನಾಮೆ ಕೊಟ್ಟಾಗ ಮತ್ತು ಅನರ್ಹತೆ ಪ್ರಕರಣ ಎರಡೂ ಇದ್ದಾಗ ಏನು ಮಾಡಬೇಕು ಎಂಬುದಕ್ಕೆ ಈಗ ಒಂದು ಮಿತಿಯಲ್ಲಿ ಸ್ಪಷ್ಟತೆ ಬಂದಿದೆ. ವಿಧಾನಸಭಾಧ್ಯಕ್ಷರ ಮೇಲೆ ಗಂಭೀರ ಕಾಮೆಂಟ್‌ ಮಾಡಿರುವುದು ಗಮನಾರ್ಹ.
-ಅಶೋಕ ಹಾರನಹಳ್ಳಿ,ಹಿರಿಯ ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT