ಬಜೆಟ್‌ ಮಂಡನೆ ಖಚಿತ: ನಾಡಗೌಡ

7

ಬಜೆಟ್‌ ಮಂಡನೆ ಖಚಿತ: ನಾಡಗೌಡ

Published:
Updated:

ಹುಬ್ಬಳ್ಳಿ: ಬಜೆಟ್‌ ಮಂಡನೆಗೆ ಯಾರದ್ದೂ ವಿರೋಧ ಇಲ್ಲ. ಜುಲೈ 5 ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬಜೆಟ್‌ ಮಂಡಿಸಲಿದ್ದಾರೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

ಬೆಳಗಾವಿಗೆ ತೆರಳುವ ಮುನ್ನ ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‌ ಮಂಡನೆ ಬಗ್ಗೆ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ. ಮಂಡನೆ ಮಾಡುವುದು ಬೇಡ ಎಂದು ಎಲ್ಲಿಯೂ ಹೇಳಿಲ್ಲ ಎಂದರು.

ಸರ್ಕಾರ ಟೇಕ್‌ ಆಫ್‌ ಆಗಿಲ್ಲ ಎಂಬ ಪ್ರತಿಪಕ್ಷ ನಾಯಕರ ಆರೋಪದಲ್ಲಿ ಹುರುಳಿಲ್ಲ. ಸರ್ಕಾರ ಟೇಕ್‌ ಆಫ್‌ ಆಗಿದ್ದು, ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಆರಂಭವಾಗಿದೆ. ಐದು ವರ್ಷ ಸರ್ಕಾರ ಇರಲಿದೆ ಎಂದು ಹೇಳಿದರು.

ಇಲಾಖೆಯಲ್ಲಿ ಪಶು ವೈದ್ಯರ ಕೊರತೆ ಇದೆ. ಶೀಘ್ರದಲ್ಲಿಯೇ 500 ಪಶು ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು. ಬಜೆಟ್‌ನಲ್ಲಿ ಇಲಾಖೆಗೆ 2,500 ಕೋಟಿ ಅನುದಾನ ನೀಡುವಂತೆ ಕೇಳಿದ್ದೇನೆ. ಇಸ್ರೇಲ್‌ ತಂತ್ರಜ್ಞಾನದಲ್ಲಿ ಮೇವು ಬೆಳೆಯಲು ಯೋಜಿಸಲಾಗಿದೆ. ಆಗ, ಜಮೀನು ಇಲ್ಲದವರೂ ಹೈನುಗಾರಿಕೆಯ ಮಾಡಬಹುದಾಗಿದೆ ಎಂದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !