ಮಂಗಳವಾರ, ಸೆಪ್ಟೆಂಬರ್ 22, 2020
22 °C
ಮೋದಿಯೇ ಅಡ್ಡ ಬಂದರೂ ರಾಮಮಂದಿರ ಕಟ್ಟೇ ಕಟ್ಟುತ್ತೇವೆ

ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ಚುನಾವಣೆ ಎದುರಿಸಿ: ಕೆ.ಎಸ್ ಈಶ್ವರಪ್ಪ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಲಬುರ್ಗಿ: ‘ಪ್ರಧಾನಿ ನರೇಂದ್ರ ಮೋದಿಯೇ ಅಡ್ಡ ಬಂದರೂ ರಾಮಮಂದಿರ ಕಟ್ಟೇ ಕಟ್ಟುತ್ತೇವೆ. ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರಿಗೆ ತಾಕತ್ತಿದ್ದರೆ ತಾವು ಅಧಿಕಾರಕ್ಕೆ ಬಂದರೆ ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ಘೋಷಿಸಿ ಚುನಾವಣೆ ಎದುರಿಸಲಿ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಮಮಂದಿರ ಕಟ್ಟಬೇಕು ಎಂಬುದು ದೇಶದ ಹಿಂದೂಗಳು, ಸಾಧು- ಸಂತರ ಆಶಯ. ಹೀಗಾಗಿ, ಮಂದಿರ ಕಟ್ಟುವುದು ನೂರರಷ್ಟು ದೃಢ ನಿರ್ಧಾರ’ ಎಂದರು.

‘ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ. ಬಿಜೆಪಿ ಗಂಗಾನದಿ ಇದ್ದ ಹಾಗೆ. ಈ ಪಕ್ಷಕ್ಕೆ ಯಾರೇ ಬಂದರೂ ಪವಿತ್ರರಾಗುತ್ತಾರೆ. ಬಿಜೆಪಿ ಬಿಟ್ಟು ಹೋಗಿ ಯಾರೂ ಉದ್ಧಾರವಾಗಿಲ್ಲ. ವಾಪಸ್‌ ಇಲ್ಲಿಯೇ ಬಂದು ಉದ್ಧಾರ ಆಗಿದ್ದಾರೆ. ನಮ್ಮ ಪಕ್ಷಕ್ಕೆ ಅಂತಹ ಶಕ್ತಿ ಇದೆ’ ಎಂದರು.

ಈಶ್ವರಪ್ಪ ಹೇಳಿರುವುದಕ್ಕೆ  ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈಶ್ವರಪ್ಪಗೆ ಮಿದುಳಿಲ್ಲ. ಅವರೊಬ್ಬ ‘ಬ್ರೈನ್‌ಲೆಸ್‌ ಮ್ಯಾನ್‌’, ಮಹಾಪೆದ್ದ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು