ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಕಳಿಸಿದ ಉಂಡಬತ್ತಿ ಕೆರೆ ನೆನಪು

ಪಾಂಡವಪುರ ತಾಲ್ಲೂಕಿನ ಜನರನ್ನು ಬೆಂಬಿಡದ ದುರಂತ
Last Updated 24 ನವೆಂಬರ್ 2018, 20:20 IST
ಅಕ್ಷರ ಗಾತ್ರ

ಮೈಸೂರು: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ದೊಡ್ಡ ದುರಂತಗಳು ಬೆಂಬಿಡದೆ ಕಾಡುತ್ತಿದೆ. ಎಂಟು ವರ್ಷಗಳ ಹಿಂದೆ ಮೈಸೂರು ಹೊರವಲಯದ ಉಂಡಬತ್ತಿ ಕೆರೆಗೆ ಮ್ಯಾಕ್ಸಿಕ್ಯಾಬ್‌ ಉರುಳಿ ಬಿದ್ದ ಘಟನೆಯಲ್ಲಿ ಇದೇ ತಾಲ್ಲೂಕಿನ 31 ಮಂದಿ ಮೃತಪಟ್ಟಿದ್ದರು.

ಅಂದಿನ ದುರಂತದಲ್ಲಿ ಮೃತಪಟ್ಟವರ ಕುಟುಂಬದವರ ಮನಸ್ಸಿನಿಂದ ಘಟನೆ ಮಾಸಿಲ್ಲವಾದರೂ, ಜನರು ನಿಧಾನವಾಗಿ ಮರೆಯುತ್ತಿದ್ದರು. ಇದೀಗ ಅದೇ ರೀತಿಯ ಮತ್ತೊಂದು ದುರಂತದಿಂದ ಇಡೀ ತಾಲ್ಲೂಕು ಶೋಕ ಸಾಗರದಲ್ಲಿ ಮುಳುಗಿದೆ. ಕನಗನಮರಡಿಯಲ್ಲಿ ನಡೆದ ಅವಘಡ ಹಳೆಯ ಘಟನೆಯನ್ನು ನೆನಪಿಗೆ ತಂದಿದೆ.

ಪಾಂಡವಪುರ ತಾಲ್ಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ 2010ರ ಡಿಸೆಂಬರ್‌ 12ರಂದು ವಿವಾಹ ಸಮಾರಂಭ ನಡೆದಿತ್ತು. ಎರಡು ದಿನಗಳ ಬಳಿಕ ಡಿ. 14ರಂದು ವರನ ಊರು ನಂಜನಗೂಡಿನಲ್ಲಿ ಬೀಗರ ಔತಣಕೂಟ ಏರ್ಪಡಿಸಲಾಗಿತ್ತು. ಔತಣಕೂಟದಲ್ಲಿ ಪಾಲ್ಗೊಂಡ ವಧುವಿನ ಕುಟುಂಬದವರು ಮತ್ತು ಸಂಬಂಧಿಕರು ಮೂರು ವಾಹನಗಳಲ್ಲಿ ಅರಳುಕುಪ್ಪೆಗೆ ವಾಪಸಾಗುತ್ತಿದ್ದರು. ವಧು–ವರರು ಕಾರಿನಲ್ಲಿದ್ದರೆ, ಏಳೆಂಟು ಪುರುಷರು ಗೂಡ್ಸ್‌ ಆಟೊದಲ್ಲಿದ್ದರು. ಮ್ಯಾಕ್ಸಿಕ್ಯಾಬ್‌ನಲ್ಲಿ ಸುಮಾರು 40 ಮಂದಿ ಇದ್ದರು. ಮ್ಯಾಕ್ಸಿಕ್ಯಾಬ್‌ ವಾಹನ ಚಾಲಕನ ನಿಯಂತ್ರಣ ತ‌ಪ್ಪಿ ಉಂಡಬತ್ತಿ ಕೆರೆಗೆ ಉರುಳಿತ್ತು. 26 ಮಹಿಳೆಯರು 4 ಮಕ್ಕಳು ಮತ್ತು ಒಬ್ಬ ಪುರುಷ ಜಲಸಮಾಧಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT