ಸಾರಿಗೆ ಬಸ್‌ ಪ್ರಯಾಣ ದರ ಶೇ18ರಷ್ಟು ಏರಿಕೆ; ಮುಂದಿನ ವಾರದಿಂದ ಪ್ರಯಾಣಿಕರಿಗೆ ಬರೆ

7
ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ

ಸಾರಿಗೆ ಬಸ್‌ ಪ್ರಯಾಣ ದರ ಶೇ18ರಷ್ಟು ಏರಿಕೆ; ಮುಂದಿನ ವಾರದಿಂದ ಪ್ರಯಾಣಿಕರಿಗೆ ಬರೆ

Published:
Updated:

ಮದ್ದೂರು: ‘ಸಾರಿಗೆ ಬಸ್‌ ಪ್ರಯಾಣ ದರವನ್ನು ಶೇ 18ರಷ್ಟು ಏರಿಕೆ ಮಾಡಲಾಗಿದ್ದು ಪರಿಷ್ಕೃತ ದರ ಮುಂದಿನ ವಾರದಿಂದಲೇ ಜಾರಿಗೆ ಬರಲಿದೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ಸಮೀಪದ ಮಾದನಾಯಕನಹಳ್ಳಿ ಗ್ರಾಮದಲ್ಲಿ ಭಾನುವಾರ ಸಿದ್ದರಾಮೇಶ್ವರ ಮಹಾಕುಂಬಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹೊಸ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಪ್ರಯಾಣ ದರ ಏರಿಕೆಗೆ ಪ್ರಸ್ತಾವ ಬಂದಿತ್ತು. ಆದರೆ ಕಳೆದ ಮೂರು ತಿಂಗಳಿಂದ ಪ್ರಸ್ತಾವವನ್ನು ನಾನೇ ತಡೆ ಹಿಡಿದಿದ್ದೆ. ಆದರೆ ದಿನೇ ದಿನೇ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳೂ ನಷ್ಟದಲ್ಲಿವೆ. ನಷ್ಟದಲ್ಲಿ ಇಲಾಖೆ ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ಬಸ್‌ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ’ ಎಂದರು.

‘ಇಂಧನ ದರ ಏರಿಕೆಯಾಗಲು ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳೇ ಕಾರಣ. ಕೇವಲ ಇಂಧನ ಮಾತ್ರವಲ್ಲದೇ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಹೀಗಾಗಿ ಸೋಮವಾರದ ಭಾರತ್‌ ಬಂದ್‌ಗೆ ಜೆಡಿಎಸ್‌ ಪಕ್ಷ ಬೆಂಬಲ ವ್ಯಕ್ತಪಡಿಸಿದೆ’ ಎಂದರು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !