ಯಡಿಯೂರಪ್ಪ–ಶೋಭಾ ಮದುವೆ ‘ಜೋಕ್‌ ಆಫ್‌ ದಿ ಇಯರ್’

ಮಂಗಳವಾರ, ಏಪ್ರಿಲ್ 23, 2019
31 °C
ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ

ಯಡಿಯೂರಪ್ಪ–ಶೋಭಾ ಮದುವೆ ‘ಜೋಕ್‌ ಆಫ್‌ ದಿ ಇಯರ್’

Published:
Updated:

ಶಿವಮೊಗ್ಗ: ತಂದೆ ಬಿ.ಎಸ್.ಯಡಿಯೂರಪ್ಪ ಅವರು ಉಡುಪಿ–ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಗುಟ್ಟಾಗಿ ವಿವಾಹವಾಗಿದ್ದಾರೆ. ಕೇಂದ್ರ ನಾಯಕರಿಗೆ ₨ 1,800 ಕೋಟಿ ಕಪ್ಪ ನೀಡಿದ್ದಾರೆ ಎಂಬ ವಿಚಾರಗಳು ‘ಜೋಕ್‌ ಆಫ್‌ ದಿ ಇಯರ್’ ಎಂದು ಸಂಸದ ಬಿ.ವೈ.ರಾಘವೇಂದ್ರ ಕುಹಕವಾಡಿದರು.

ನಾಲ್ಕು ದಶಕಗಳು ರಾಜಕೀಯ ಕ್ಷೇತ್ರದಲ್ಲೇ ಕಳೆದಿರುವ ಅವರಿಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ. ಯಡಿಯೂರಪ್ಪ ಅವರ ಕೈ ಬರಹ ಚೆನ್ನಾಗಿ ಬಲವರು ಇಂತಹ ಜಾಲ ಹೆಣೆದಿದ್ದಾರೆ. ಇದು ಕಾಂಗ್ರೆಸ್ ಕುತಂತ್ರ. ಇಂತಹ ಪ್ರಚಾರಗಳಿಂದ ಬಿಜೆಪಿಗೆ, ತಮ್ಮ ಕುಟುಂಬಕ್ಕೆ ಯಾವುದೇ ಮುಜಗರವಾಗಿಲ್ಲ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

2009ರ ನಕಲಿ ಡೈರಿ ಇಟ್ಟುಕೊಂಡು ಸುಳ್ಳು ಆರೋಪ ಮಾಡಲಾಗಿದೆ. ಯಾರಾದರೂ ಡೈರಿ ಬರೆಯುವ ಅಭ್ಯಾಸ ಇದ್ದವರು ಪ್ರತಿ ಪುಟದಲ್ಲೂ ಸಹಿ ಹಾಕುತ್ತಾರೆಯೇ? ಇಂತಹ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಕುರಿತು ಚಿಂತನೆ ನಡೆದಿದೆ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !