ಏರ್‌ ಷೋ ಸ್ಥಳಾಂತರದ ಹಿಂದೆ ಚುನಾವಣೆ ರಾಜಕೀಯ: ಸಿ.ಎಂ

7
ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕೆ

ಏರ್‌ ಷೋ ಸ್ಥಳಾಂತರದ ಹಿಂದೆ ಚುನಾವಣೆ ರಾಜಕೀಯ: ಸಿ.ಎಂ

Published:
Updated:
Deccan Herald

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆಯಬೇಕಿದ್ದ ಏರ್‌ ಷೋ ಅನ್ನು ಉತ್ತರಪ್ರದೇಶದ ಲಖನೌಗೆ ಸ್ಥಳಾಂತರಿಸಿರುವುದರ ಹಿಂದೆ ಚುನಾವಣೆಯ ರಾಜಕೀಯ ಇದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಮುಖ್ಯಮಂತ್ರಿಯಾದ ಬಳಿಕ ಮೊದಲ ಸಲ ಭಾನುವಾರ ಹುಬ್ಬಳ್ಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ನಿರ್ಧಾರದ ಹಿಂದೆ, ಚುನಾವಣೆ ಉದ್ದೇಶವಲ್ಲದೆ ಬೇರೇನೂ ಇಲ್ಲ’ ಎಂದರು.

ಈ ಬಗ್ಗೆ, ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಬೆಂಗಳೂರಿನಲ್ಲೇ ಏರ್‌ ಷೋ ನಡೆಸುವಂತೆ ಒತ್ತಾಯಿಸಲಾಗುವುದು ಎಂದರು.

**

ನದಿ ಜೋಡಣೆ ಸಭೆ 20ಕ್ಕೆ

‘ನದಿ ಜೋಡಣೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇದೇ 20ರಂದು ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ನದಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವುದನ್ನು ತಪ್ಪಿಸಿ, ಅಗತ್ಯವಿರುವ ಕಡೆ ಬಳಕೆ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ಕುರಿತು ತಜ್ಞರಿಂದ ಸಲಹೆಗಳನ್ನು ಪಡೆದಿದ್ದು 300ಕ್ಕೂ ಹೆಚ್ಚು ಸಲಹೆಗಳು ಬಂದಿವೆ’ ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

**

ನಿಜವೇ ಆದಲ್ಲಿ, ರಾಜ್ಯಕ್ಕೆ ಮಾಡಿದ ಅವಮಾನ’

ಬೆಂಗಳೂರು: ‘ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಏರೋ ಇಂಡಿಯಾ ಪ್ರದರ್ಶನವನ್ನು ಉತ್ತರಪ್ರದೇಶಕ್ಕೆ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿರುವುದು ನಿಜವೇ ಆದಲ್ಲಿ, ಅದು ರಾಜ್ಯದ ಜನರಿಗೆ ಅವರು ಮಾಡುವ ಅವಮಾನ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘22 ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಏರೋ ಇಂಡಿಯಾ ಪ್ರದರ್ಶನ ನಡೆಯುತ್ತಿದೆ. ತೀರ್ಮಾನ ಅಂತಿಮವಾಗಿದ್ದರೆ, ರಾಜಕಾರಣ ದುರುದ್ದೇಶದಿಂದಲೇ ಹೀಗೆ ಮಾಡಿದ್ದಾರೆ ಎಂದು ಭಾವಿಸುತ್ತೇನೆ’ ಎಂದರು.

**

ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ, ಇದೇ 20ರಂದು ನ್ಯಾಯಮಂಡಳಿ ತೀರ್ಪು ನೀಡಲಿದೆ. ತೀರ್ಪು ನ್ಯಾಯಬದ್ಧವಾಗಿ ನಮ್ಮ ಪರವಾಗಿ ಇರಲಿದೆ ಎಂಬ ವಿಶ್ವಾಸವಿದೆ
-ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವ

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !