ಶುಕ್ರವಾರ, ಡಿಸೆಂಬರ್ 6, 2019
21 °C
ಭರವಸೆ ಈಡೇರಿಸದ ಎಚ್‌. ವಿಶ್ವನಾಥ ವಿರುದ್ಧ ಆಕ್ರೋಶ

ಯೋಗೇಶ್ವರ್‌ಗೆ ಘೇರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು (ಮೈಸೂರು): ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಪರ ಮತ ಯಾಚನೆಗೆ ತೆರಳಿದ್ದ, ಪಕ್ಷದ ಮುಖಂಡ ಸಿ.ಪಿ.ಯೋಗೇಶ್ವರ್‌ ಅವರನ್ನು ತಾಲ್ಲೂಕಿನ ಗ್ರಾಮಸ್ಥರು ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಹನಗೋಡು ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಯೋಗೇಶ್ವರ್‌ ಅವರು ಪ್ರಚಾರ ಕೈಗೊಂಡಿದ್ದರು. ಹೆಗ್ಗಂದೂರು ಗ್ರಾಮಕ್ಕೆ ಬಂದಾಗ ಅವರನ್ನು ಸುತ್ತುವರಿದ ಕೆಲ ಯುವಕರು, ‘ಗ್ರಾಮದೊಳಗೆ ಬರಬೇಡಿ. ನೀವು ಒಬ್ಬರೇ ಪ್ರಚಾರಕ್ಕೆ ಬಂದಿದ್ದೇಕೆ? ನಿಮ್ಮ ಅಭ್ಯರ್ಥಿ ವಿಶ್ವನಾಥ್‌ ಅವರನ್ನೂ ಕರೆದುಕೊಂಡು ಬನ್ನಿ. ಅವರನ್ನು ಪ್ರಶ್ನಿಸಬೇಕಿದೆ’ ಎಂದು ವಾಗ್ವಾದಕ್ಕಿಳಿದರು.

ವಿಶ್ವನಾಥ್‌ ಅವರು ಹೆಗ್ಗಂದೂರು ಗ್ರಾಮದಲ್ಲಿ ರಸ್ತೆ ನಿರ್ಮಿಸುವ ಭರವಸೆ ಕೊಟ್ಟಿದ್ದರು. ಅದನ್ನು ಈಡೇರಿಸದ ಕಾರಣ, ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಯುವಕರನ್ನು ಸಮಾಧಾನಪಡಿಸಿದ ಯೋಗೇಶ್ವರ್ ಸ್ಥಳದಿಂದ ತೆರಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು