ಸದ್ಯದಲ್ಲೇ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ

7

ಸದ್ಯದಲ್ಲೇ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ

Published:
Updated:

ಹುಬ್ಬಳ್ಳಿ: ಕೆಲ ಕಾರಣಗಳಿಂದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಈಗ ಮತ್ತೆ ತಡವಾಗುವುದಿಲ್ಲ, ಶೀಘ್ರವೇ ವಿಸ್ತರಣೆ ಆಗಲಿದೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ‌ ಮಾತನಾಡಿದ‌ ಅವರು ಮುಖ್ಯಮಂತ್ರಿ ಜವಾಬ್ದಾರಿ ‌ನಿಭಾಯಿಸುವ ಸಮರ್ಥರು ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ‌ಜನರಿದ್ದಾರೆ.‌ ಅಂದ‌ಮಾತ್ರಕ್ಕೆ ಅವರೆಲ್ಲರೂ‌ ಮುಖ್ಯಮಂತ್ರಿ ‌ಸ್ಥಾನದ ಆಕಾಂಕ್ಷಿಗಳು‌ ಎಂದರ್ಥವಲ್ಲ‌ ಎಂದರು.

ಕೇಂದ್ರ ಸರ್ಕಾರದಿಂದ ಸಿಬಿಐ ದುರುಪಯೋಗ ಆಗುತ್ತಿದೆ. ಯಾವುದೇ ರಾಜ್ಯದಲ್ಲಿ ‌ಸಿಬಿಐ ತನಿಖೆ‌‌ ನಡೆಸಬೇಕಾದರೆ ಆಯಾ ರಾಜ್ಯದ‌ ಅನುಮತಿ‌ ಪಡೆಯಬೇಕು ‌ಎನ್ನುವ ನಿಯಮವೇ ಇದೆ. ಇದನ್ನು ‌ಕೇಂದ್ರ ದುರುಪಯೋಗ ‌ಮಾಡಿಕೊಳ್ಳುತ್ತಿದೆ‌ ಎಂದು ದೂರಿದರು.

ಇಂದಿರಾ ಕ್ಯಾಂಟೀನ್‌ನಿಂದ‌ ಬಡವರ‌ ಹಸಿವು‌‌ ನೀಗಿದೆ.‌‌ ಇದರ ಶ್ರೇಯ ‌ನಮ್ಮ ಪಕ್ಷಕ್ಕೆ‌ ಸೇರಬಾರದು‌ ಎನ್ನುವ ದುರುದ್ದೇಶದಿಂದ‌ ಬಿಜೆಪಿ ‌ಸಂಚು ಮಾಡುತ್ತಿದೆ. ಬಿಜೆಪಿಯವರು ಅಡ್ಡಗಾಲು ಹಾಕುತ್ತಿದ್ದಾರೆ. ಜಿ.ಪರಮೇಶ್ವರ ಸಿಎಂ ಆಗುವ ತಮ್ಮ ಆಸೆ ಹೇಳಿಕೊಂಡಿದ್ದಾರೆ. ಇದರಲ್ಲಿ‌ ತಪ್ಪೇನು‌ ಇಲ್ಲ ‌ಎಂದರು.

ನೆಹರೂ ಅವರನ್ನು ಹಿಟ್ಲರ್ ಎಂದು ಕರೆಯುವ ಆರ್‌ಎಸ್ಎಸ್‌ನವರು ಫ್ಯಾಸಿಸ್ಟ್ ಮನೋಭಾವ ಹೊಂದಿದ್ದಾರೆ.‌ ಬಿಜೆಪಿಯವರು ಹಿಟ್ಲರ್‌ನಂತೆ ಆಡಳಿತ ನಡೆಸುತ್ತಿದ್ದಾರೆ. ‌ಅವರು‌ ಹಿಟ್ಲರ್ ‌ವಂಶದವರು‌ ಎಂದು ಟೀಕಿಸಿದರು.

ಸಚಿವ ಬಂಡೆಪ್ಪ‌ ಕಾಶೆಂಪುರ‌ ಮಾತನಾಡಿ, ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ‌ರೈತರ‌ ಜೊತೆ‌‌ ಸಭೆ‌ ನಡೆಸುತ್ತಾರೆ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !