ಸೋಮವಾರ, ಸೆಪ್ಟೆಂಬರ್ 16, 2019
27 °C

ಸಚಿವ ಸಂಪುಟ ವಿಸ್ತರಣೆ; ಬೆಳಗಾವಿಯ ರಾಜಕಾರಣಕ್ಕೆ ಶಾಕ್‌ ನೀಡಿದ ಬಿಜೆಪಿ

Published:
Updated:

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಚಿವ ಸಂಪುಟ ಮಂಗಳವಾರ ವಿಸ್ತರಣೆಯಾಗಿದ್ದು, ಅಥಣಿಯ ಲಕ್ಷ್ಮಣ ಸವದಿ ಹಾಗೂ ನಿಪ್ಪಾಣಿಯ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಅವಕಾಶ ದೊರೆತಿದೆ. 

ಜಿಲ್ಲೆಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವ ಹೊಂದಿರುವ  ಶಾಸಕರಾದ ಉಮೇಶ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡದೇ ಬಿಜೆಪಿ ಶಾಕ್‌ ನೀಡಿದೆ. 

ಎಂಟು ಸಲ ಶಾಸಕರಾಗಿರುವ ಹುಕ್ಕೇರಿಯ ಉಮೇಶ ಕತ್ತಿ ಹಾಗೂ ಐದು ಸಲ ಶಾಸಕರಾಗಿರುವ ಅರಭಾವಿಯ ಬಾಲಚಂದ್ರ ಜಾರಕಿಹೊಳಿ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಇವರನ್ನು ಬಿಟ್ಟು, ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಥಣಿಯ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದು  ಹಲವರ ಹುಬ್ಬೇರಿಸುವಂತೆ ಮಾಡಿದೆ. 

ಎರಡನೇ ಬಾರಿಗೆ ಶಾಸಕಿಯಾಗಿರುವ, ನಿಪ್ಪಾಣಿಯ ಶಶಿಕಲಾ ಜೊಲ್ಲೆ ಅವರಿಗೆ ಮಹಿಳಾ ಕೋಟಾದಡಿ ಸಚಿವ ಸ್ಥಾನ ದೊರೆತಿದೆ. 

ಜಾರಕಿಹೊಳಿ ಕುಟುಂಬ ಹೊರಗೆ: 
ಕಳೆದ ಒಂದೂವರೆ ದಶಕದಿಂದ ಜಾರಕಿಹೊಳಿ ಕುಟುಂಬದ ಒಬ್ಬರಲ್ಲ ಒಬ್ಬ ಸದಸ್ಯರು ಸಚಿವ ಸಂಪುಟದಲ್ಲಿ ಇರುತ್ತಿದ್ದರು. ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ ಅವರು ವಿವಿಧ ಪಕ್ಷಗಳ ಸರ್ಕಾರಗಳಲ್ಲಿ ಸಚಿವರಾಗಿದ್ದರು. ಆದರೆ, ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬದ ಸದಸ್ಯರು ಹೊರಗುಳಿದಿದ್ದಾರೆ.

Post Comments (+)