ಒಡೆದ ಕಾಲುವೆ: ಕೊಚ್ಚಿ ಹೋದ ಬೆಳೆ

7

ಒಡೆದ ಕಾಲುವೆ: ಕೊಚ್ಚಿ ಹೋದ ಬೆಳೆ

Published:
Updated:
Deccan Herald

ಕುರುಗೋಡು (ಬಳ್ಳಾರಿ ಜಿಲ್ಲೆ): ಇಲ್ಲಿಗೆ ಸಮೀಪದ ಬಸವಪುರ ಗ್ರಾಮದ ಬಳಿ ತುಂಗಭದ್ರಾ ಕೆಳಮಟ್ಟದ ಕಾಲುವೆ ಒಡೆದು, ಶುಕ್ರವಾರ ಅಪಾರ ಪ್ರಮಾಣದ ನೀರು ಪೋಲಾಗಿದೆ.

ಕಾಲುವೆಯಲ್ಲಿ 1,600 ಕ್ಯುಸೆಕ್ ನೀರು ಹರಿಯುತ್ತಿತ್ತು. ನೀರಿನ ರಭಸಕ್ಕೆ ಸುತ್ತಲಿನ ಗೆಣಿಕೆಹಾಳು, ಹೊಸಗೆಣಿಕೆಹಾಳು ಮತ್ತು ಕ್ಯಾದಿಗೆಹಾಳು ಗ್ರಾಮಗಳ ವ್ಯಾಪ್ತಿಯ ಎರಡು ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಕೊಚ್ಚಿಹೋಗಿದೆ.

ಅಪಾರ ಪ್ರಮಾಣದ ನೀರು ರಸ್ತೆಯ ಮೇಲೂ ಹರಿದಿದ್ದರಿಂದ, ಹೊಸಗೆಣಿಕೆಹಾಳು ಮತ್ತು ಸಿರಿಗೇರಿಯಿಂದ ಕುರುಗೋಡಿಗೆ ಕೆಲ ತಾಸು ಸಂಪರ್ಕ ಕಡಿತಗೊಂಡಿತ್ತು.

ಸ್ಥಳಕ್ಕೆ ಭೇಟಿ ನೀಡಿದ ತುಂಗಭದ್ರಾ ಜಲ ಮಂಡಳಿ ಕಾರ್ಯದರ್ಶಿ ನಾಗಮೋಹನ್, ಸಮೀಪದ ಗುಂಡಿಗನೂರು ಕೆರೆ ವ್ಯಾಪ್ತಿಯ ರೈತರು ಕಾಲುವೆಯನ್ನು ಒಡೆದಿರುವ ಶಂಕೆ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲಿಸಲಾಗುವುದು; ಶನಿವಾರದಿಂದಲೇ ದುರಸ್ತಿ ಕಾರ್ಯ ಆರಂಭಿಸಿ, ಮೂರು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !