ಸೋಮವಾರ, ನವೆಂಬರ್ 18, 2019
20 °C

ವರ್ಗಾವಣೆಯಿಂದ ವಿನಾಯಿತಿ ಪಡೆದಿದ್ದ ಕ್ಯಾನ್ಸರ್‌ ಪೀಡಿತೆ ಸಾವು

Published:
Updated:

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರ ಮಧ್ಯಪ್ರವೇಶದಿಂದ ಈ ಬಾರಿಯ ವರ್ಗಾವಣೆಯಿಂದ ಪಾರಾಗಿದ್ದ ನಗರದ ಎಲ್ಲಕುಂಟೆಯ ಕ್ಯಾನ್ಸರ್‌ ಪೀಡಿತ ಶಿಕ್ಷಕಿ ಮಹೇಶ್ವರಿ ನಿಧನರಾಗಿದ್ದಾರೆ.

‘ಶಿಕ್ಷಕಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಮಹೇಶ್ವರಿ ಅವರ ಅನಾರೋಗ್ಯದ ಕುರಿತು ನನಗೆ ಮಾಹಿತಿ ದೊರಕಿದ್ದು ಮಾಧ್ಯಮಗಳಿಂದಲೇ. ಅವರ ನಿಧನದ ಕುರಿತೂ ಸಹ ಮಾಧ್ಯಮಗಳಿಂದಲೇ ಮಾಹಿತಿ ದೊರೆಯಿತು. ಹೀಗಾಗಿ ಬುಧವಾರ ದೊಡ್ಡಬಾಣಸವಾಡಿಗೆ ಹೋಗಿ, ಅವರ ಪಾರ್ಥಿವ ಶರೀರದ ಅಂತಿಮ‌ ದರ್ಶನ ಪಡೆದು ನಮಸ್ಕರಿಸಿ ಬಂದೆ’ ಎಂದು ಸಚಿವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

 

ಪ್ರತಿಕ್ರಿಯಿಸಿ (+)