ಗೋಮಾಂಸ ತುಂಬಿದ್ದ ಕಾರು ವಶ

7

ಗೋಮಾಂಸ ತುಂಬಿದ್ದ ಕಾರು ವಶ

Published:
Updated:

ಶಿವಮೊಗ್ಗ: ಕೊಟ್ಟಿಗೆಯಲ್ಲಿದ್ದ ಗೋವು (ದನ) ಕಳವು ಮಾಡಿ, ಅದನ್ನು ಕತ್ತರಿಸಿ ಅದರ ಮಾಂಸ ಸಾಗಿಸುತ್ತಿದ್ದ ಕಾರು ವಶಕ್ಕೆ ಪಡೆಯಲಾಗಿದೆ.

ಕಲ್ಲೂರು ಮಂಡ್ಲಿಯ ಚಂದ್ರಶೇಖರ್ ಅವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು ಕಣ್ಮರೆಯಾಗಿತ್ತು. ಅದನ್ನು ಹುಡುಕುತ್ತಿದ್ದಾಗ, ಕೆಲವರು ಕತ್ತರಿಸಿ ಕಾರಿಗೆ ತುಂಬುತ್ತಿರುವ ಮಾಹಿತಿ ದೊರಕಿದೆ. ತಕ್ಷಣ ಚಂದ್ರಶೇಖರ್ ಗ್ರಾಮಸ್ಥರ ಜತೆ ತೆರಳಿದ್ದಾರೆ. ಆಗ ಆರೋಪಿಗಳು ಪರಾರಿಯಾಗಿದ್ದಾರೆ.

ಗ್ರಾಮಸ್ಥರು ಬೈಕ್‌ನಲ್ಲಿ ಅವರನ್ನು ಅಣ್ಣಾ ನಗರದವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಸಂಚಾರ ದಟ್ಟಣೆ ಇದ್ದ ಕಾರಣ ಕಾರು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಗೋಮಾಂಸ ತುಂಬಿದ್ದ ಕಾರು ಹಿಡಿದು ತುಂಗಾ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಪ್ರತಿಭಟನೆ: ಈ ಭಾಗದಲ್ಲಿ ಗೋವು ಕಳವು ಸಾಮಾನ್ಯವಾಗಿದೆ. ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಠಾಣೆ ಎದುರು ಪ್ರತಿಭಟನೆ ನಡೆಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !