ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತ ಪತ್ತೆಹಚ್ಚುವ ‘ಕಾರ್ಡಿಯೋಸ್ಕ್ರೀನ್‌’

ಜಯದೇವ ಆಸ್ಪತ್ರೆಯಿಂದ ಈ ಯಂತ್ರ ಅಳವಡಿಕೆ
Last Updated 20 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯರ ನೆರವಿಲ್ಲದೆ ಹೃದಯಾಘಾತವನ್ನು ಶೀಘ್ರವಾಗಿ ಖಚಿತಪಡಿಸಬಲ್ಲ ವಿನೂತನ ತಂತ್ರಜ್ಞಾನ ‘ಕಾರ್ಡಿಯೋಸ್ಕ್ರೀನ್‌’ ಯಂತ್ರಕ್ಕೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮಂಗಳವಾರ ಚಾಲನೆ ನೀಡಿದೆ.

ಈ ಯಂತ್ರವನ್ನು ಬೆಂಗಳೂರು, ಮೈಸೂರು ಮತ್ತು ಕಲಬುರ್ಗಿ‌ಯಲ್ಲಿರುವ ಜಯದೇವ ಸಂಸ್ಥೆಯ ಸುತ್ತಮುತ್ತಲಿನ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಹೃದಯಾಘಾತ ಆದಾಗ ಪ್ರತಿ ಕ್ಷಣವು ಅಮೂಲ್ಯ. ಇಂತಹ ಸಂದರ್ಭದಲ್ಲಿ ವ್ಯಕ್ತಿ ಹೃದಯಾಘಾತ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಚಿಕಿತ್ಸೆ ನೀಡುವುದು ವಿಳಂಬ ಆದಷ್ಟೂ ಸಾವಿನ ಪ್ರಮಾಣ ಹೆಚ್ಚಾಗುತ್ತದೆ. ಗ್ರಾಮೀಣ ಪ್ರದೇಶ, ಪಟ್ಟಣ ಮತ್ತು ಸಣ್ಣ ನಗರಗಳ ಆರೋಗ್ಯ ಕೇಂದ್ರಗಳಲ್ಲಿ ಇಸಿಜಿ ವ್ಯವಸ್ಥೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ವೈದ್ಯರ ನೆರವಿಲ್ಲದೆ ಯಾರು ಬೇಕಾದರೂ ಕಾರ್ಡಿಯೋಸ್ಕ್ರೀನ್ ಬಳಸಿ ಹೃದಯಾಘಾತವನ್ನು ಖಚಿತಪಡಿಸಿಕೊಳ್ಳಬಹುದು ಎಂದು ಮಂಜುನಾಥ್‌ ತಿಳಿಸಿದರು.

ಐಮೆಡ್ರಿಕ್ಸ್ ಸಂಸ್ಥೆಯ ಸಂಸ್ಥಾಪಕ ಶ್ರೀಕಾಂತ್‌ ಮಾತನಾಡಿ, ಈ ಉಪಕರಣ ಮೊಬೈಲ್‌ ಫೋನ್‌ ಗಾತ್ರದಲ್ಲಿದ್ದು, ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ.

ಇಸಿಜಿ ಯಂತ್ರದ ನೆರವಿಲ್ಲದೇ ಇದರ ಮೂಲಕ ಹೃದಯಾಘಾತವನ್ನು ಖಚಿತಪಡಿಸಿಕೊಳ್ಳಬಹುದು. ರೋಗಿಯ ಆರೋಗ್ಯ ಸ್ಥಿತಿಯನ್ನೂ ತಿಳಿದುಕೊಳ್ಳಬಹುದು. ಪರಿಸ್ಥಿತಿ ಗಂಭೀರವಾಗಿದ್ದರೆ, ರೋಗಿಗೆ ಅಗತ್ಯ ಚಿಕಿತ್ಸೆ ನೀಡಿ ಅವರನ್ನು ಸಮೀಪದ ಆಸ್ಪತ್ರೆಗಳಿಗೆ ಒಯ್ಯಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT